ಭಾಷಣಗಾರ : ನೋಡಿ, ಈ ಕುಡುತಾ ಅನ್ನೋದು ಮಹಾ ಕೆಟ್ಟದ್ದು. ಇದರಿಂದ ಹಣ ಹಾಳು, ಆರೋಗ್ಯ ಹಾಳು.ಇಲ್ಲಿ ನೋಡಿ ಒಂದು ಪ್ರಯೋಗ ತೋರಿಸುತ್ತೇನೆ.ಈ ಬಕೇಟ್ನಲ್ಲಿ ಬ್ರಾಂದಿ ಇದೆ, ಇದರಲ್ಲಿ ನೀರಿದೆ. ಇದನ್ನ ಕತ್ತೆ ಮುಂದೆ ಇಡ್ತೀನಿ. ಅದು ಯಾವುದನ್ನು ಕುಡಿಯುತ್ತದೆ ನೀವೇ ನೋಡಿ
ರಾಜು : ಕತ್ತೆ ನೀರನ್ನೇ ಕುಡಿಯುತ್ತೆ?
ಭಾಷಣಗಾರ : ಕತ್ತೆ ಏಕೆ ನೀರನ್ನೇ ಕುಡಿಯುತ್ತೆ?
ರಾಜು : ಅದು ಕತ್ತೆ ಅದಕ್ಕೆ ನೀರು ಕುಡಿಯುತ್ತೆ. ಅದಕ್ಕೆ ಕಾರಣ ಏಕೆ ಬೇಕು?
ರಾಜು ಪತ್ನಿಯನ್ನು ಕಾಣಲು ಮಹಿಳಾ ಮಂಡಳಿಯವರು ಬಂದರು. ಅದರ ಅಧ್ಯಕ್ಷರು ರಾಜುವನ್ನು ಕೇಳಿದರು.
ಅಧ್ಯಕ್ಷೆ ಸರ್ ಅಮ್ಮಾವರು ಇದಾರಾ
ರಾಜು ಇಲ್ಲ.
ಅಧ್ಯಕ್ಷೆ : ಎಷ್ಟು ಹೊತ್ತಿಗೆ ಬರ್ತಾರೆ?
ರಾಜು : ಗೊತ್ತಿಲ್ಲ.
ಅಧ್ಬಕ್ಷೆ : ನಾವು ಇಲ್ಲಿ ಸ್ವಲ್ಪ ಹೊತ್ತು ಕೂರಬಹುದಾ?
ರಾಜು : ಧಾರಾಳವಾಗಿ.
ಅಧ್ಯಕ್ಷೆ ಅವರು ಹೋಗಿ ಬಹಳ ಒತ್ತಾಯಿತೆ
ರಾಜು : ಕೇವಲ ಐದು ವರ್ಷವಾಯ್ತು.
ಅಧ್ಯಕ್ಷೆ : ನಿಮ್ಮನ್ನು ಬಿಟ್ಟು ಇಷ್ಟು ವರ್ಷ ಎಲ್ಲಿಗೆ ಹೋದ್ರು
ರಾಜು : ಸ್ಮಶಾನಕ್ಕೆ.
***
ಕಿಟ್ಟು : ಎಲೋ ರಾಜು, ನಿನ್ನ ಕಾರೇ ಕಾಣ್ತಾ ಇಲ್ಲಾ?
ರಾಜು : ಸಾಲ ಕಟ್ಟೋಕೆ ಆಗಲಿಲ್ಲ. ಹೀಗಾಗಿ ಬ್ಯಾಂಕಿನವರು ಎತ್ಕೊಂಡು ಹೋದ್ರು.
ಕಿಟ್ಟು : ಹೀಗೋ ಬ್ಯಾಂಕಿನವರ ಸಹವಾಸ.
ರಾಜು : ಇದು ಮುಂಚೆಯೇ ನನಗೆ ಗೊತ್ತಿದ್ರೆ ಬ್ಯಾಂಕ್ ಸಾಲ ತಗೊಂಡೇ ಮದುವೆ ಆಗ್ತಿದ್ದೆ.