ಮನೆ ಹಾಸ್ಯ ಹಾಸ್ಯ

ಹಾಸ್ಯ

0


ಗಿರಾಕಿ : (ಹೋಟೆಲ್ ನಲ್ಲಿ ತಿಂಡಿ ತಿಂತಾ ಇದ್ದ ಜೋರಾಗಿ )ರೀ, ಬರ್ರೀ ಇಲ್ಲೀ.
ರಾಜು : ಯಾಕೆ ಸಾರ್? ಏನಾಯ್ತು?
ಗಿರಾಕಿ : ಹೋಟೆಲ್ ಮಾಲೀಕರು ನೀವೇ ತಾನೇ?
ರಾಜು : ಹೌದು ಏನಾಯ್ತು?
ಗಿರಾಕಿ : ಏನ್ರಿ ಇದು? ತಿಂಡಿಯಲ್ಲಿ ಕೂದ್ಲಿದೆ.
ರಾಜು : ಸಾರ್ ಆ ಕೂದ್ಲು ಬಿಳೀದೋ ಕರೀದೋ?
ಗಿರಾಕಿ : ಯಾಕೆ ಹೇಳಿ?
ರಾಜು : ನಿಮಗೆ ಸಿಕ್ಕಿದ ಕೂದಲು ಬೆಳ್ಳಗಿದ್ರೆ, ಅದು ಅಡಿಗೆ ಭಟ್ಟರ ಕೂದ್ಲು, ಕಪ್ಪಾಗಿದ್ರೆ ಅಕ್ಕಿ ಮಾಡೋ ಹೆಂಗಸಿನ ಕೂದ್ಲು.ಅದು ಯಾರ ಕೂದ್ಲೂ ಅಂತ ತಿಂಳ್ಕೊಂಡು ಅವರನ್ನ ಶಿಕ್ಷಿಸೋಣಾ ಅಂತ.

Join Our Whatsapp Group

ಕಿಟ್ಟು : ಯಾಕೋ ರಾಜು ಒಂಥರಾ ಮಂಕಾಗಿದ್ದೀಯಾ?
ರಾಜು : ಯಾಕೂ ಇಲ್ಲಾ ಕಣೋ ನನ್ನ ನಾಲ್ಕು ವರ್ಷದ ಮಗ ನಾನು ಕಷ್ಟಪಟ್ಟು ಬರೆದ ಕವಿತೆ ಹಾಳೆಗಳನ್ನೆಲ್ಲಾ ಹರಿದು ಹಾಕ್ಬಿಟ್ಟ.
ಕಿಟ್ಟು : ಪರವಾಗಿಲ್ಲಯ್ಯ ಈ ಚಿಕ್ಕ ವಯಸ್ಸಿಗೆ ಅವನಿಗೆ ಕಾವ್ಯಜ್ಞಾನ ತಿಳಿದುಬಿಟ್ಟಿದೆ.

ಕಿಟ್ಟು : ಲೋ ರಾಜು….
ರಾಜು : ಏನೋ?
ಕಿಟ್ಟು : ನಿನ್ನ ಹತ್ರ ಸ್ವಲ್ಪ ಮಾತ್ನಾಡಬೇಕಿತ್ತು.
ರಾಜು : ಬಾ ಒಳಗೆ.
ಕಿಟ್ಟು : ನಾಯಿ ಬೇರೆ ತಂದಿದ್ದೀಯಾ ಕಚ್ಚುತ್ತೇನೋ?
ರಾಜ ರಾತ್ರಿ ತಂದೆ. ಕಚ್ಚುತ್ತೋ ಇಲ್ಟೋ ಗೊತ್ತಿಲ್ಲ.ನೀನು ಬಾ ಒಳಗೆ ಗೊತ್ತಾಗುತ್ತೆ.

ಹಿಂದಿನ ಲೇಖನಎದೆಯಲ್ಲಿ ಹಾಲು ಬರಲು
ಮುಂದಿನ ಲೇಖನಮೈಸೂರು ಮಹಾನಗರ ಪಾಲಿಕೆಯಲ್ಲಿ ಖಾಲಿ ಇರುವ ಪೌರ ಕಾರ್ಮಿಕ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ