ಉಪಾಧ್ಯಾಯ : ರಾಜು ನಿನ್ನ ತಂದೆ ಏನ್ಮಾಡ್ತಾರೆ?
ರಾಜು : ನಾಲ್ಕಾರು ಜನಕ್ಕೆ ಮಾರ್ಗದರ್ಶನ ಮಾಡುತ್ತಾರೆ.
ಉಪಾಧ್ಯಾಯ : ವೆರಿ ಗುಡ್ ಈಗ ಕಾಲದಲ್ಲಿ ಜನ ಸೇವಕರು ಸಿಗೋದೇ ಇಲ್ಲಾ ಅಂದ ಹಾಗೆ ಯಾವ ರೀತಿ ಸಮಾಜ ಸೇವೆ ಮಾಡ್ತಾರೆ?
ರಾಜು : ಅವರು ಸಂಚಾರಿ ವಿಭಾಗದ ಪೊಲೀಸ್ ಪೇದೆ.
***
ರಾಜು : (8ಹೆಂಡತಿಯೊಂದಿಗೆ ಒಂದು ಜಾತ್ರೆಗೆ ಹೋಗಿದ್ದ ಅಲ್ಲಿ) ಲೇ ಗೀತ, ಒಂದು ವೇಳೆ ಈ ಜಾತ್ರೇಲಿ ತಪ್ಪಿಸಿಕೊಂಡ್ರೆ ಏನ್ ಮಾಡ್ತೀಯಾ?
ಗೀತ : ಪೇಪರ್ನಲ್ಲಿ ಜಾಹಿರಾತ್ ಕೊಡ್ತೇನೆ.
ರಾಜು : ಏನಂತಾ ಜಾಹಿರತ್ ಕೊಡ್ತೀಯಾ?
ಗೀತ : ನನಗೆ ಗಂಡ ಬೇಕಾಗಿದ್ದಾನೆ ಅಂತ.
***
ರಾಜು ಒಮ್ಮೆ ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದ. ತಾನು ಇಳಿಯಬೇಕಾದಲ್ಲಿ ಸೀಟಿ ಹೊಡೆದ. ಬಸ್ಸು ಅಲ್ಲಿ ನಿಲ್ಲಲಿಲ್ಲ ಮುಂದೆ ಹೋಯಿತು.
ರಾಜು : ರೀ ಡ್ರೈವರ್, ನಾನು ಆಗ್ಲೆ ಸೀಟಿ ಹೊಡೆದಿದ್ದೀನಿ ಬಸ್ಸು ನಿಲ್ಲಿಸಬಾರದಾ?
ಡ್ರೈವರ್ : ಇಲ್ಲಿ ನಾನು ಬ್ರೇಕ್ ಹಾಕಿದ್ರೇ ಗಾಡಿ ನಿಲ್ತಾ ಇಲ್ಲ. ಇನ್ನು ನಿನ್ನ ಸೀಟೀಗೆ ಗಾಡಿ ನಿಲ್ಲುತ್ತಾ