ಕಿಟ್ಟು : (ಕಿಟ್ಟು ರಾಜು ಕಾರಿನಲ್ಲಿ ಹೋಗುತ್ತಿದ್ದರು. ರಾಜು ಬಹಳ ಸ್ವೀಡಾಗಿ ಕಾರು ಓಡಿಸುತ್ತಿದ್ದ ) ಲೋ ರಾಜು, ಯಾಕೋ ಇಷ್ಟು ಸ್ಪೀಡಾಗಿ ಕಾರ್ ಓಡುಸ್ತಾ ಇದ್ದೀಯ?
ರಾಜು : ಕಾರ್ ಬ್ರೇಕ್ ಫೇಲಾಗಿದೆ. ಎಲ್ಲಾದ್ರೂ ಆಕ್ಸಿಡೆಂಟ್ ಆದೀತು. ಹಾಗಾಗೋಕೆ ಮುಂಚೆ ಮನೆ ಸೇರ್ಕೊಂಡ್ ಬಿಡೋಣ ಅಂತ.
***
ಶಿಕ್ಷಕ : ನೋಡು ರಾಜು, ನಿನ್ಮೇಲೆ ತುಂಬಾ ದೂರಗಳು ಬರ್ತಾ ಇದೆ.
ಶಾಲೆಯಲ್ಲಿರೋ ಹೆಣ್ಣುಮಕ್ಕಳನ್ನ ಅಕ್ಕ ತಂಗಿಯೋರು ಅಂತ ತಿಳ್ಕೋ. ನೀನು ಒಳ್ಳೆಯ ಹುಡುಗಾ ಅನ್ನುಸ್ಕೋಬೇಕು.
ರಾಜು : ನಾನೇನೋ ಒಳ್ಳೆ ಹುಡುಗ ಅನ್ನಿಸಿಕೊಳ್ತೀನಿ ಸಾರ್.ಆದರೆ ನಮ್ಮಪ್ಪನ್ನ ಎಲ್ರೂ ಕೆಟ್ಟವನೂ ಅಂತ ತಿಳ್ಕೊಳ್ತಾರೆ.
***
ಕಿಟ್ಟು : ಲೋ ರಾಜು, ಇವತ್ತು ನನ್ನ ಹೆಂಡ್ತೀಗೆ ಬೆಳಿಗ್ಗೆ ಆಪರೇಷನ್ ಆಯ್ತು ನೋಡು, ಆಗಿನಿಂದಲೂ ಒಂದು ಹನಿ ನೀರು ಕುಡಿದಿಲ್ಲಾ ಕಣೋ.
ರಾಜು : ಹಾಗಾದ್ರೆ ಒಂದರ್ಧ ಕೆ.ಜಿ ಉಪ್ಪು ತಿನ್ಸು.
ಕಿಟ್ಟು ಉಪ್ಪು ತಿನ್ನಿಸಿದ್ರೆ ಏನಾಗುತ್ತೆ?
ರಾಜು :ಲೋ ಉಪ್ಪುತಿಂದೋರು ನೀರು ಕುಡಿಯಲೇ ಬೇಕು.