ಮನೆ ಹಾಸ್ಯ ಹಾಸ್ಯ

ಹಾಸ್ಯ

0

ಹೆಂಡತಿ : ನಿಮಗೆ ಎಷ್ಟು ಸಾರಿ ಹೇಳೋದು,ಕೆಲಸ ಮಾಡಬೇಕಾದ್ರೆ ಮುತ್ತು ಕೊಡಬೇಡಿ ಅಂತ…|

ಮನೆಕೆಲಸದಾಕೆ : ಹೌದು ಅಮ್ಮೋರೆ , ಇವರ್ಗೆ ಎಷ್ಟು ಹೇಳಿದ್ರು ಅಷ್ಟೇ , ನನಗಂತೂ ಹೇಳಿ ಹೇಳಿ ಸಾಕಾಗೋಗಿದೆ…..

Join Our Whatsapp Group

*****

ಬಿಕ್ಷುಕ : 10 ರೂಪಾಯಿ ಇದ್ದರೆ ಕೊಡಿ ಸಾರ್ .. . ನನ್ ಗರ್ಲ್ ಫ್ರೆಂಡ್ ಗೆ ಫೋನ್ ಮಾಡಬೇಕು …..

ದಾರಿಹೋಕ : ನೋಡಿ , ಪಾಪ ಬಿಕ್ಷುಕ ಕೂಡ , ತನ್ನ ಲವರ್ ನ ಎಷ್ಟು ಪ್ರೀತಿ ಮಾಡ್ತಾನೆ….

ಬಿಕ್ಷುಕ : ಅಯ್ಯಯ್ಯೋ ….ಆಗೇನು ಇಲ್ಲ, ಅವಳನ್ನ ಲವ್ ಮಾಡಿದ ಮೇಲೇನೆ ನಾನು ಬಿಕ್ಷುಕ ಆಗಿದ್ದು ..!

*****

ತಂದೆ : ರಿಸಲ್ಟ್ ಏನಾಯಿತೋ  . . . ಮಗ : Headmaster ಮಗನೂ Fail . . .

ತಂದೆ : ನಿನ್ result ಏನಾಯ್ತೋ . . . 

ಮಗ : Doctor ಮಗನೂ Fail . . .

ತಂದೆ : ಮುಂಡೇದೆ ನಿನ್ Result ಏನಾಯ್ತೋ . . .

ಮಗ : ನೀನೇನು SuperStar Rajanikanth ಅಂದ್ಕೊಂಡ್ಯ , ನಿನ್ ಮಗನೂ Fail . . .

******

ಹುಡುಗ ಎಕ್ಸಾಂ ನಲ್ಲಿ ಪಾಸ್ ಆದ್ರೆ

ಅಮ್ಮ: ಎಲ್ಲಾ ದೇವರ ದಯೆ.

ಅಪ್ಪ:ನೀನು ನನ್ನ ಮಗ ಕಣೋ.

ಫ್ರೆಂಡ್: ಬಾ ಮಗ ಬಾರ್ ಗೆ ಹೋಗೋಣ.

ಫೇಲ್ ಆದ್ರೆ.

ಅಮ್ಮ: ಎಲ್ಲಾ ಈ ಮೋಬೈಲ್ ನಿಂದಾನೆ,

ಅಪ್ಪ:ಹುಡುಗೀರ ಹಿಂದೆ ಸುತ್ತುದ್ರೆ ಹೀಗೆ ಆಗೋದು.

ಫ್ರೆಂಡ್: ಬಾ ಮಗ ಬಾರ್ ಗೆ ಹೋಗೋಣ . . .. . . Friends never change

******

ಹುಡುಗ: ಹಾಯ್

ಹುಡುಗಿ; ಹಲೋ

ಹುಡುಗ; ಎಲ್ಲಿದ್ದೀಯ

ಹುಡುಗಿ:ನಾನು ಅಪ್ಪನ ಜೊತೆ BMW ಕಾರ್ ನಲ್ಲಿ ಶಾಪಿಂಗ್ ಮುಗಿಸ್ಕೊಂಡು ಬರುತ್ತಾ ಇದೀನಿ.ನೀನು ಎಲ್ಲಿದ್ದೀಯ?

ಹುಡುಗ : ನಾನು BMTC ಬಸಲ್ಲಿ ನೀನ್ ಹಿಂದೆ ಕುತಿದ್ದೇನೆ ಟೀಕೆಟ್ ತಗೋಬೇಡ ನಾನೇ ತಗೋತೀನಿ

ಹುಡುಗಿ ಶಾಕ್

*****

ಗುಂಡ:- ನನ್ನಜ್ಜ ಯುದ್ಧದಲ್ಲಿ 50 ಜನರ ಕಾಲು ಕಡಿದಿದ್ದಾರೆ.

ರಂಗ:- ತಲೆಯಾಕೇ ಕಡಿಲಿಲ್ಲ?

ಗುಂಡ:- ಅದನ್ನು ಯಾರೋ ಮೊದಲೇ ಕಡಿದಿದ್ರು.!

******

ಗುಂಡ ರೈಲ್ವೆ ಟಿಸಿಯ ಬಳಿ ವಿಚಾರಿಸುತ್ತಾನೆ..

ಗುಂಡ: ಎಕ್ಸ್ ಪ್ರೆಸ್ ಟ್ರೈನ್ ಎಷ್ಟು ಗಂಟೆಗಿದೆ?

ಟಿಸಿ: ಒಂದು ಗಂಟೆಗೆ

ಗುಂಡ: ಲೋಕಲ್ ಟ್ರೈನ್?

ಟಿಸಿ: 9 ಗಂಟೆಗೆ

ಗುಂಡ: ಗೂಡ್ಸ್ ಗಾಡಿ..?

ಟಿಸಿ: ನಿನಗೆ ಎಲ್ಲಪ್ಪಾ ಹೋಗಬೇಕು?

ಗುಂಡ: ಎಲ್ಲೂ ಇಲ್ಲಾ.. ಹಳಿ ದಾಟಬೇಕಿತ್ತು.