ರಾಜು : ಅಪ್ಪಾ. ಇಂಗ್ಲಿಷ್ ಅಕ್ಷರದಲ್ಲಿ ಎಲ್ ಆದ್ಮೇಲೆ ಎಂ ಯಾಕೆ ಬರುತ್ತೆ.
ಅಪ್ಪ :ಅದು ಬರೋದು ಇಂಗ್ಲಿಷಿನಲ್ಲಲ್ಲ ನನ್ನ ಕ್ರಮಕ್ಕೆ,ನನ್ನ ಜೀವಮಾನದಲ್ಲೇ ಬಂದಿರೋದು ಅದು
ರಾಜು : ಅದೇನು ಹೇಳಿದಿಯೋ ನನಗೆ ಗೊತ್ತಾಗ್ಲಿಲ್ಲ ಸ್ವಲ್ಪ ಬಿಡಿಸಿ ಹೇಳಪ್ಪಾ.
ಅಪ್ಪ : ನಿಮ್ಮಮ್ಮನ್ನ ಮೊದಲ ಲವ್ ಮಾಡ್ದೆ. ಅದಕ್ಕೆ ಮೊದಲು ಎಲ್, ಬಂತು.ಆಮೇಲೆ ಎಂ ಬಂತು, ಗೊತ್ತಾಯ್ತಾ?
***
ಗೀತ : ನಿಮ್ಮಂಗಂಡೀಲಿ ಗ್ರೀಟಿಂಗ್ ಕಾರ್ಡ್ ಇದೆಯಾ?
ಅಂಗಡಿಯವ : ಬೇಕಾದಷ್ಟಿದೆ.
ಗೀತ : ಹಾಗಲ್ಲ ನಾನು ನೀನೊಬ್ಬನೇ ಪ್ರೀತಿಸಿರೋದು ಬೇರೆ ಯಾರನ್ನು ಪ್ರೀತಿಸಿಲ್ಲ ಅನ್ನೋ ಗ್ರೀಟಿಂಗ್ ಕಾರ್ಡಿದೆಯಾ?
ಅಂಗಡಿಯವ : ಆ ಕಾರ್ಡು ಇದೆ.
ಗೀತ : ಹಾಗಾದ್ರೆ ಆ ಕಾರ್ಡು ಒಂದು 10 ಕೊಟ್ಟಿರಿ.