ಮನೆ ಹಾಸ್ಯ ಹಾಸ್ಯ

ಹಾಸ್ಯ

0

 ರಾಜು : ಸಾರ್, ನಮ್ಮ ಅಧಿಕಾರಿ ಮಹಾಲಂಚಕೋರ. ಅವನನ್ನ ಹಿಡಿದು ಸರಿಯಾಗಿ ಬಲಿ ಹಾಕಬೇಕು.

 ಲಂಚನಿರೋಧಕಾರಿ : ಆಯ್ತು ಹಾಗೇ ಮಾಡ್ತೀನಿ ನನಗೆಷ್ಟು ಕೊಡ್ತೀಯ?

***

 ರಾಜು : ಗೀತ, ಇವತ್ತು ಪ್ರೇಮಿಗಳ ದಿನ. ಬಾ ಯಾವುದಾದರೂ ಒಳ್ಳೆಯ ಹೋಟೆಲ್ ಗೆ ಹೋಗೋಣ.

 ಗೀತ : ಹೋಟೆಲ್ ಗೇನೋ ಬರ್ತೀನಿ ಆದ್ರೆ ನಿನ್ನ ಮದುವೆ ಆಗೋಲ್ಲ.

 ರಾಜು : ಬೇಡ ಬಿಡು.ಹೋಟೆಲ್ ನ ಲ್ಲಿ ನಿನಗಿಷ್ಟ ಬಂದದ್ದು ಇಷ್ಟ ಬಂದಷ್ಟು ತಿನ್ನು, ನಾನು ಹಾಗೆ ತಿಂತೀನಿ.

 ಸಪ್ಪೆಯರ್ : ಸರ್ ಮತ್ತೇನು ಬೇಕು?

 ರಾಜು : ಏನು ಬೇಡ. ಬಿಲ್ ಎಷ್ಟಾಯ್ತು?

 ಸಪ್ಲೇಯರ್ : ಸರ್ ಬಿಲ್ ಐದು ಸಾವಿರವಾಯ್ತು.

 ರಾಜು : ಗೀತ, ನೀನು ಬಿಲ್ ಕೊಡ್ತೀಯೋ ಇಲ್ಲಾ ನನ್ನ ಮದುವೆ ಆಗ್ತೀಯೋ?

 ಗೀತ : ಮದುವೆನೇ ಆಗ್ತೀನಿ.

***

 ಮೇಡಂ : ಕೋಳಿ ಮೊಟ್ಟೆ ನೋಡಿದ್ದೀರಾ?

 ರಾಜು : ನೋಡಿದ್ದೇನೆ ಮೇಡಂ.

 ಮೇಡಂ : ಹಾಗಾದ್ರೆ ಹೇಳು, ಮೊಟ್ಟೆ ಒಳಗಿಂದ ಮರಿ ಹೇಗೆ ಬರುತ್ತೆ?

 ರಾಜು : ಮೊಟ್ಟೆ ಒಳಕ್ಕೆ ಮರಿ ಹೇಗೆ ಹೋಯ್ತು ಅಂತ ನೀವು ಹೇಳಿದ್ರೆ ಮರಿ ಹೇಗೆ ಬಂತು ಅಂತ ನಾನು ಹೇಳ್ತೀನಿ.