ವೆಂಕಿ : ವಾಸು ಸ್ವರ್ಗ ಅಂದರೆ ಏನು?
ವಾಸು : ಸ್ವರ್ಗ ಅಂದರೆ ಅಮೆರಿಕಾದ ಸಂಬಳ, ಬ್ರಿಟನ್ನಿನ ಮನೆ, ಚೀನಾದ ಆಹಾರ,ಭಾರತದ ಹೆಂಡತಿ.
ವೆಂಕಿ : ನರಕಾ ಅಂದರೆ?
ವಾಸು : ಭಾರತದ ಸಂಬಳ, ಬ್ರಿಟನ್ನಿನ ಆಹಾರ, ಚೀನಾದ ಮನೆ, ಅಮೇರಿಕಾದ ಹೆಂಡತಿ.
***
ಜ್ಯೋತಿ : ರೀ ಇವತ್ತು ನನ್ನ ಫ್ರೆಂಡ್ ಬರ್ತಾಳೆ, ರಾತ್ರಿ ನನ್ನ ಜತೆ ಮಲಗುತ್ತಾಳೆ. ನೀವು ಇವತ್ತೊಂದಿನ ಮಾಹಡಿ ಮೇಲೆ ಮಲಗ್ತೀರಾ?
ವಾಸು : ಆಯ್ತು ಮಲಗ್ತೀನಿ ನಾಳೆ ನನ್ನ ಗರ್ಲ್ ಫ್ರೆಂಡ್ ಬರ್ತಾಳೆ.ಆಗ ನೀನು ಮಾಹಡಿ ಮೇಲೆ ಮಲಗ್ತೀಯಾ?
***
ವೆಂಕಿ : ವಾಸು ನಿನ್ನ ಒಂದು ಪ್ರಶ್ನೆ ಕೇಳಲಾ?
ವಾಸು : ಒಂದಿಲ್ಲದಿದ್ರೆ ಹತ್ತು ಪ್ರಶ್ನೆ ಕೇಳು.
ವೆಂಕಿ : ರಬ್ಬರ್ ಎಳೆದರೆ ಏನಾಗುತ್ತೇ?
ವಾಸು : ಉದ್ದವಾಗುತ್ತೆ.
ವೆಂಕಿ : ಅದೇ ಪೇಪರ್ ಎಳೆದ್ರೆ ಏನಾಗುತ್ತೇ?
ವಾಸು : ಹರಿದುಹೋಗುತ್ತೆ
ವೆಂಕಿ : ಹಾಗಾದ್ರೆ ಎಳೆದಷ್ಟು ಮೊಟಕಾಗುವುದು ಯಾವುದು?
ವಾಸು : ಅಯ್ಯೋ ಗುಲ್ಡೂ, ಅಷ್ಟು ಗೊತ್ತಿಲ್ವೇನೋ ಸಿಗರೇಟ್, ಬೀಡಿ.
ಡಾಕ್ಟರ್ : ನೋಡಿ ನಿಮ್ಮ ಆರೋಗ್ಯ ಚೆನ್ನಾಗಿರಬೇಕೂ ಅಂದ್ರೆ ಪ್ರತೀದಿನ ಕೊನೆ ಒಂದು ಪಕ್ಷ 12ಲೋಟ ನೀರು ಕುಡಿಯಬೇಕು.
ವಾಸು : ಅದು ಸಾಧ್ಯವಾಗದ ಮಾತು ಡಾಕ್ಟ್ರೇ.
ಡಾಕ್ಟರ್ : ಏಕೆ ಸಾಧ್ಯವಿಲ್ಲಾ?
ವಾಸು : ನಮ್ಮನೇಲಿರುವುದು ನಾಲ್ಕೇ ಲೋಟ.














