ಬಹು ವರ್ಷಗಳ ನಂತರ ಭೇಟಿಯಾದ ಗೆಳೆಯ ಕೇಳಿದೆ ‘ಏನು, ನೀನು ಮದುವೆಯಾಗಿರುವೆಯಾ? ಇನ್ನೂ ಅಡಿಗೆಯನ್ನು ಮಾಡಿಕೊಳ್ಳುತ್ತಾ ಇರುವೆಯ?’
ಗೆಳೆಯ ಉತ್ತರಿಸಿದ ‘ನಿನ್ನ ಎರಡೂ ಪ್ರಶ್ನೆಗೂ ಉತ್ತರ ಒಂದೇ ಹೌದು.’
ಹೆಂಡತಿ : ನೀವು ನಿಮ್ಮ ಸಂಬಂಧಿಕರನ್ನು ಮಾತ್ರ ಹೆಚ್ಚಿಗೆ ಪ್ರೀತಿಸುತ್ತೀರಿ. ನನ್ನವರನ್ನು ಪ್ರೀತಿಸುವುದಿಲ್ಲ.’
ಗಂಡ : ಹಾಗೇಕೆ ಹೇಳುತ್ತಿ? ನಾನು ನಿನ್ನ ಮಾವ, ನಿನ್ನ ಅತ್ತೆ, ನಿನ್ನ ಅತ್ತಿಗೆ ನಾದಿನಿಯರು,ನಿನ್ನ ಭಾವಮೈದುನರನ್ನು ನನ್ನ ಆತ್ತೆ,ಮಾವ,ಭಾವಮೈದನ, ಅತ್ತಿಗೆ ನಾದಿನಿಯರಿಗಿಂತ ಹೆಚ್ಚಾಗಿಯೇ ಪ್ರೀತಿಸುತ್ತಿಲ್ಲವೆ?
ಮಹಾಸಾಗರದಲ್ಲಿ ಒಂದು ಹಡಗು ಮುಳುಗುತ್ತಿತ್ತು. ಒಬ್ಬ ವ್ಯಕ್ತಿ ಇನ್ನೊಬ್ಬನನ್ನು ಕೇಳಿದ,, “ಇಲ್ಲಿಂದ ನೆಲ ಎಷ್ಟು ಅಂತರದಲ್ಲಿದೆ? ”ಇನ್ನೊಬ್ಬನೆಂದ “ಮೂರು ಕಿಲೋಮೀಟರ್” ಕೂಡಲೇ ಆ ವ್ಯಕ್ತಿ ಸಾಗರಕ್ಕೆ ಹಾರಿ ಮತ್ತೆ ಕೇಳಿದ “ಯಾವ ದಿಕ್ಕಿಗೆ? ”ಇನ್ನೊಬ್ಬ ಉತ್ತರಿಸಿದ “ಕೆಳ ದಿಕ್ಕಿಗೆ!”














