ಒಬ್ಬ : ನನಗಿಂದು 20,000 ಬೇಕೇ ಬೇಕು ಇಲ್ಲವಾದರೆ ವಿಷ ಕುಡಿದು ಸಾಯಬೇಕಾಗುವುದು. ನೀನು ಸ್ವಲ್ಪ ಸಹಾಯ ಮಾಡ್ತೀಯಾ
ಗೆಳೆಯ : ನನ್ನಲ್ಲಿ ಅಷ್ಟು ಹಣವಿಲ್ಲ.ವಿಷ ಖರೀದಿ ಮಾಡಲು ಬೇಕಾಗುವಷ್ಟು ಹಣವಿದೆ. ಬೇಕಿದ್ದರೆ ಕೊಡುತ್ತೇನೆ.
ಕ್ಲಾಸಿನಲ್ಲಿ ಗುರುಗಳು ಆಮದು ಮತ್ತು ರಫ್ತು ಎಂದರೇನೆಂದು ವಿವರಿಸುತ್ತಿದ್ದರು. ಗುಂಡನಿಗೆ ಅಮದು ರಫ್ತಿನ ಬಗ್ಗೆ ಉದಾಹರಣೆ ಸಹಿತ ಹೇಳು ಎಂದರು. ಗುಂಡ ಹೇಳಿದ “ಅಮದು ನಮ್ಮ ದೇಶಕ್ಕೆ ಬೇರೆ ದೇಶದಿಂದ ತರಿಸಿಕೊಳ್ಳುವುದು ಉದಾಹರಣೆ, ಸೋನಿಯಾ ರಫ್ತು ಎಂದರೆ ನಮ್ಮ ದೇಶದಿಂದ ಪರದೇಶಕ್ಕೆ ಕಳಿಸುವುದು ಉದಾಹರಣೆ ಸಾನಿಯಾ” ಎಂದು!
ಹೆಂಡತಿ : ಇಂದು ನಮ್ಮ ಮದುವೆಯಾದ ದಿನ. ನಾವು ಏನು ಮಾಡೋಣ?
ಗಂಡ : ನಾವು ಎದ್ದು ನಿಂತು ಎರಡು ನಿಮಿಷ ಮೌನವನ್ನು ಆಚರಿಸೋಣ.
Saval TV on YouTube