ಬೆಳ್ಳಗಾಗುತ್ತೆ
ಶಂಕರ್ : “ಮೇಡಂ ಈ ಸೋಪಿನ ಪುಡಿ ಬಳಸುವುದರಿಂದ ಬಟ್ಟೆ ಬೆಳ್ಳಗಾಗುತ್ತೆ.”
ಶೀಲಾ : “ಹಾಗಾದ್ರೆ ಬೇಡ ಬಿಡಿ”
ಶಂಕರ್ : “ಯಾಕೆ?”
ಶೀಲಾ : “ನಮ್ಮ ಮನೆಯವರ ಕರಿ ಕೋಟು ಬೆಳ್ಳಗಾದರೆ ಅವರು ಕೋರ್ಟಿಗೆ ಹೋಗುವುದಾದರೆ ಹ್ಯಾಗೆ.”
*****
ಶ್ರದ್ಧೆ
ಕಲಾಕಾರನೊಬ್ಬ ತನ್ನ ಮನೆಯ ಗೋಡೆಯ ಮೇಲೆ ಜೇಡರ ಬಲೆಯ ಚಿತ್ರ ಬರೆದಿದ್ದು, ಇದನ್ನು ನಿಜವಾದ ಜೇಡರ ಬಲೆ ಎಂದು ತಿಳಿದು ಕೆಲಸದಾಕೆ ದಿನವಿಡೀ ಗುಡಿಸಿದಳು. ಇದನ್ನು ಹೆಮ್ಮೆಯಿಂದ ಕಲಾಕಾರನ ಹೆಂಡತಿ ಪಕ್ಕದ ಮನೆ ಯಾಕೆಗೆ ಹೇಳಿದಾಗ ಆಕೆ ಹೇಳಿದಳು.
“ಇಂಥಹ ಕಲಾಕಾರ ಬೇಕಾದರೆ ಸಿಗಬಹುದು ಆದರೆ ಅಷ್ಟು ನಿಯತ್ತಿನ ಕೆಲಸದವರು ಸಿಗುವುದು ಕಷ್ಟ.”
*****
ಬಿಟ್ಟೆ
ಗುಂಡ : “ಪತ್ರಿಕೆಗಳಲ್ಲಿ ಸಿಗರೇಟು ಸೇವನೆಯಿಂದ ಆಗುವ ಹಾನಿಯ ಕುರಿತು ಬರುವ ಲೇಖನ ಓದಿ ಓದಿ ಕೊನೆಗೂ ಬಿಟ್ಟೆ.”
ಶೀಲಾ : “ಏನು ಸಿಗರೇಟ್ ಸೇದುವುದನ್ನೇ ಬಿಟ್ಟಿರಾ?”
ಗುಂಡ : “ಇಲ್ಲಾ ಪೇಪರ್ ಓದುವುದನ್ನು ಬಿಟ್ಟೆ.”
Saval TV on YouTube