ಶಾಂತಮ್ಮ: “ಗೌರಮ್ಮನವರೇ. ನಿಮ್ಮ ಯಜಮಾನರು ಎರಡು ದಿನಗಳಿಂದ ಕಾಣುತ್ತಿಲ್ಲವಲ್ಲಾ, ಊರಲ್ಲಿ ಇಲ್ಲವೆ?”
ಗೌರಮ್ಮ: “ಆಯ್ಯೋ, ನಮ್ಮ ಯಜಮಾನರು ‘OOD’ ಹೋಗಿದ್ದಾರಮ್ಮಾ ಅದಕ್ಕೇ ಕಾಣಿಸುತ್ತಿಲ್ಲ.”
ಶಾಂತಮ್ಮ: “ಏನು, ಚೆನ್ನಾಗಿದೆ; ಓಡಿ ಹೋಗಿದ್ದಾರಾ ಎಲ್ಲಿಗೆ?!”
***
ಶ್ರೀಮಂತನೊಬ್ಬ ಮರಣಶಯ್ಯೆಯಲ್ಲಿದ್ದಾಗ ಮೃತ್ಯು ಪತ್ರಬರೆಯಲು ತನ್ನ ವಕೀಲರಿಗೆ ಹೇಳಿ ಕಳುಹಿಸಿದ. ವಕೀಲರು ಬಂದು ಪತ್ರಕ್ಕೆ ಸಿದ್ಧತೆ ನಡೆಸಿದರು.
ಶ್ರೀಮಂತ: “ವಕೀಲರೇ, ಬೆಂಗಳೂರಿನಲ್ಲಿರುವ ನನ್ನ ಮನೆಯನ್ನು ನನ್ನ ಹಿರಿಯ ಮಗನಿಗೆ ಬರೆಯಿರಿ.”
ವಕೀಲ: “ಬೇಡ- ಆ ಮನೆಯನ್ನು ನಿಮ್ಮ ಪತ್ನಿ ಹೆಸರಿಗೆ ಮಾಡೋಣ.”
ಶ್ರೀಮಂತ: ಆಗಲಿ ಎಂದರು. ನಂತರ “ನನ್ನ ಕಾರನ್ನು ದೊಡ್ಡ ಮಗನಿಗೆ ಬರೆಯಿರಿ.”
ವಕೀಲ: “ಬೇಡ- ಆ ಕಾರನ್ನು ಕಿರಿ ಮಗನಿಗೆ ಮಾಡೋಣ.”
ಶ್ರೀಮಂತ: “ಆಯಿತು. ನನ್ನ ಒಂದು ಲಕ್ಷ ರೂ ಷೇರುಗಳನ್ನು ನನ್ನ ತಮ್ಮನ ಹೆಸರಿಗೆ ಬರೆಯಿರಿ.”
ವಕೀಲ: “ಸಾಧ್ಯವಿಲ್ಲ. ಆ ಶೇರುಗಳನ್ನು ತಮ್ಮದೊಡ್ಡ ಮಗನಿಗೆ ಬರೆಯೋಣ.”
ಶ್ರೀಮಂತ: “ಒಂದು ಮಾತು ಕೇಳಲೆ?”
ವಕೀಲ: “ಕೇಳಿ ಯಾರು ಬೇಡ ಆಂದಾರು:”
ಶ್ರೀಮಂತ: “ಸಾಯುತ್ತಿರುವುದು ನಾನೋ ಆಥವಾ ತಾವೋ?”
ವಕೀಲರು ಬಾಯಿ ಮುಚ್ಚಿದರು.