ಅದೊಂದು ಬುದ್ದಿ ಜೀವಿಗಳ ಸಭೆ, ಸಭಿಕರಿಗೆ ಭಾಷಣಕಾರರೊಬ್ಬರು ಸವಾಲೊಂದನ್ನು ಎಸೆದರು: “ಈ ಜಗತ್ತನತ್ನಿ ನಿಯಂತ್ರಿಸುವ ಮೂರು ಮಹಾಶಕ್ತಿಗಳಾವುವು?”
ಒಬ್ಬ ವೇದಾಂತಿ: “ಸೃಷ್ಟಿ, ಸ್ಥಿತಿ ಲಯಗಳಿಗೆ ಕಾರಣ ಕರ್ತರಾದ ಬ್ರಹ್ಮ, ವಿಷ್ಣು, ಮಹೇಶ್ವರ,” ಎಂದರು.
ಪ್ರಾಪಂಚಿಕವಾದಿ:”ಹಣ, ವರ್ಚಸ್ಸು ಮತ್ತು ಬುದ್ಧಿಶಕ್ತಿ.”
ಶಿಕ್ಷಣ ತಜ್ಞ: “ಆರೋಗ್ಯ, ಮನಸ್ಸು ಮತ್ತು ಆತ್ಮ”
ರಾಜಕಾರಣಿ: “ಎಮ್. ಎಲ್.ಎ, ಎಂಪಿ ಮತ್ತು ಮಂತ್ರಿ ಎಂದ.”
***
ಎದುರಿಗೆ ಸಾಹಿತಿಯೊಬ್ಬರು ಎದುರಾದರು.- ಶಾಮಣ್ಣ ಅವರನ್ನು ಮಾತಿಗೆ ಎಳೆದ. “ಏನು ಈಚೀಚಿಗೆ ನಿಮ್ಮ ಬರಹ ಕಾಣುತ್ತಿಲ್ಲವಲ್ಲ. ಬರೆಯುವುದನ್ನು ನಿಲ್ಲಿಸಿ ಬಿಟ್ಟಿರಾ?” ಕೇಳಿದ.
ಸಾಹಿತಿ: “ಇಲ್ಲವಲ್ಲಾ, ನಾನು ಒಂದೇಸಮನೆ ಬರೆಯುತ್ತಲೇ ಇದ್ದೇನಲ್ಲಾ, ಆದರೆ ಪತ್ರಿಕೆಗಳಲ್ಲಿ ನನ್ನ ಬರಹಗಳು ಪ್ರಕಟವಾಗುತ್ತಿಲ್ಲ ಅಷ್ಟೆ!”