ನಾಡಿಗೇರ ಕೃಷ್ಣರಾಯರು ಹಳೆಯ ತಲೆಮಾರಿನ ಪ್ರಸಿದ್ಧ ಹಾಸ್ಯ ಸಾಹಿತಿಗಳು.
ಒಮ್ಮೆ ಕ್ಲಬ್ಬಿನಿಂದ ಮನೆಗೆ ಬರುವಾಗ ರಾತ್ರಿ ಎರಡುಗಂಟೆ ಅಗಿತ್ತು. ಬೀಟ್ ಡ್ಯೂಟಿಯಲ್ಲಿದ್ದ ಪೋಲೀಸ್‌ನವ ನಾಡಿಗೇರರ ರಟ್ಟೆ ಹಿಡಿದು ಯಾರು ನೀನು? ಎಂದು ಕೇಳಿದಾಗ ನಾನು ನಾಡಿಗೇರ ಕೃಷ್ಣರಾಯ ಎಂದು ಒಣಗುತ್ತಿದ್ದ ನಾಲಿಗೆಯಲ್ಲಿ ನುಡಿದರು. “ನೋಡು ಆ
ಮಹಾನುಭಾವನ ಹೆಸರು ಕೆಡಿಸಬೇಡ ನಡೀ ಪೋಲೀಸ್‌ಸ್ಟೇಷನ್‌ಗೆ” ಎನ್ನುತ್ತಾ ನಾಡಿಗೇರರನ್ನು
ಸ್ಟೇಷನ್‌ಗೆ ಎಳೆದುಕೊಂಡು ಹೋದ!
***
ಆತ ಗಿಣಿ ಮಾರಾಟ ಮಾಡುವ ವ್ಯಕ್ತಿ- ಅವನ ಬಳಿಗೆ ಬಂದ ಗಿರಾಕಿ ಗಿಣಿಗೆ ಬೆಲೆಯಷ್ಟು? ಎಂದು ಕೇಳಿದ “ಒಂದು ನೂರು ರೂಪಾಯಿಗಳು ಮಾತ್ರ” ಮಾರಾಟದವ ನುಡಿದ. “ಏನು ಈ ಗಿಣಿಗೆ ನೂರು ರೂಪಾಯಿ ಬೆಲೆಯೇ?” ಕೇಳಿದ. “ಅದನ್ನೇ ಕೇಳಿ ಬೇಕಾದರೆ”. ಮಾರಾಟದವ ನುಡಿದ. “ನಿನ್ನ ಬೆಲೆ ನೂರು ರೂಪಾಯಿಯಂತೆ ಹೌದಾ ಗಿಣಿ?” ತಕ್ಷಣವೇ ಗಿಣಿ ಹೇಳಿತು: “ಅದರಲ್ಲೇನು ಅನುಮಾನ?” ಖುಷಿಪಟ್ಟು ನೂರು ರೂಪಾಯಿ ಕೊಟ್ಟು ಗಿಣಿಯನ್ನು ಕೊಂಡು ದಾರಿಯಲ್ಲಿ ಬರುವಾಗ “ಅಲ್ಲಾ ಎಲ್ಲಾ ಬಿಟ್ಟು ನಿನಗೆ ನೂರು ರೂಪಾಯಿ ಕೊಟ್ಟಿನಲ್ಲಾ, ನಾನು ಎಂತಹ
ದಡ್ಡ ಶಿಖಾಮಣಿ ಅಂತೀನಿ?” ತಟ್ಟನೆ ಗಿಣಿ ಉತ್ತರಿಸಿತು: “ಅದರಲ್ಲೇನು ಅನುಮಾನ?”!
***
ಅದೊಂದು ಸರ್ಕಾರಿ ಆಸ್ಪತ್ರೆ ಆಸ್ಪತ್ರೆಗೆ ಹೋಗುವ ಮುಖ್ಯ ಬೀದಿಯಲ್ಲಿ (One way) ‘ಏಕಮುಖ
ಸಂಚಾರ’ ಎಂದು ಬೋರ್ಡು ಹಾಕಿದ್ದರು. ರೋಗಿಯನ್ನು ಆಸ್ಪತ್ರೆಗೆ ಕರೆದುಕೊಂಡು ಬರುತ್ತಿದ್ದವರು “ಇದರ ಅರ್ಥ ಏನು ಎಂದು ತಿಳಿಯಬಹುದೆ?” ಎಂದು ವೈದ್ಯರನ್ನು ಕೇಳಿದರು. “ನಿಮಗೆ ಹೇಗೆ ಅರ್ಥವಾಗುತ್ತದೋ ಹಾಗೆ ತಿಳಿದುಕೊಳ್ಳಿ” ಎಂದರು.!