ಒಬ್ಬ ತರುಣ ಲೇಖಕ ೧೦೦೦ ಪುಟಗಳಷ್ಟು ಕಾದಂಬರಿಯೊಂದನ್ನು ಬರೆದು ಆದಕ್ಕೆ ಸೂಕ್ತ
ತಲೆಬರಹವೊಂದನ್ನು ಸೂಚಿಸಲು ಪ್ರಸಿದ್ಧ ಲೇಖಕನ ಬಳಿ ತಂದುಕೊಟ್ಟ.
ಈತ ಪುಸ್ತಕಗಳ ಪುಟಗಳನ್ನು ತಿರುವಿಹಾಕುತ್ತಾ “ಇದರಲ್ಲಿ ಮದುವೆ ಮತ್ತು ದಿಬ್ಬಣದ
ಪ್ರಸ್ತಾಪವನ್ನೇನಾದರೂ ಬರೆದಿದ್ದೀಯಾ?” ಕೇಳಿದರು.
ತರುಣ ಲೇಖಕ: “ಅಂತಹ ಪ್ರಸ್ತಾಪವನ್ನು ಬರೆದಿಲ್ಲ” ಆಂದ.
ಪ್ರಸಿದ್ಧಲೇಖಕರು: “ಸರಿ ಹಾಗಾದರೆ ಈ ಕಾದಂಬರಿಗೆ ‘ಮದುವೆಯೂ ಇಲ್ಲ: ದಿಬ್ಬಣವೂ ಇಲ್ಲ’ ಎಂದು ಹೆಸರಿಡು. ಈ ಕಾದಂಬರಿಗೆ ಅದೇ ಸೂಕ್ತವಾದ ಹೆಸರು,” ಅಂದರು.
***
ಆತ: “ನನ್ನ ಮೂಗು ಬದಲಾಯಿಸೋಕೆ ಎಷ್ಟು ಚಾರ್ಜ್ ಮಾಡ್ತೀರಾ ಡಾಕ್ಟರ್?”
ಡಾಕ್ಷರ್:” ಹತ್ತು ಸಾವಿರ ರೂಪಾಯಿಗಳು”
ಆತ: “ಕಡಿಮೆ ಬೆಲೆಯಲ್ಲಿ ಅಂದರೆ ಚೀಪಾಗಿ ಆಗೋಲ್ವೆ?”
ಡಾಕ್ಷರ್: “ಚೀಪಾಗೇನೋ ಆಗುತ್ತೆ; ಯಾವುದಾದರೂ ಬೀದಿ ಪದ ಕಂಭಕ್ಕೆ ಡಿಕ್ಕಿ ಹೊಡೆಯಿರಿ.”