ಅಧಿಕಾರಿ : ನಿನಗೆ ಕೆಲಸ ಕೊಟ್ರೆ ಕೆಲವೇ ದಿನಗಳಲ್ಲಿ ಬಿಟ್ಟು ಹೋಗಲ್ಲ ಅಂತ ಏನು ಗ್ಯಾರೆಂಟಿ
ನೌಕರ : ಖಂಡಿತ ಬಿಟ್ಟು ಹೋಗಲ್ಲ ಬೇಕಿದ್ರೆ ಹೆಂಡ್ತಿನ ಕೇಳಿ ಸರ್ ಅವಳು ಎಷ್ಟೇ ಗೋಳು ಹುಯ್ಕೊಂಡ್ರು 20 ವರ್ಷದಿಂದ ಅವಳನ್ನ ಬಿಟ್ಟು ಹೋಗದೆ ಜೊತೇಲಿ ಇದೀನಿ…
*****
ಬಾಲುಗೆ ಮೇಷ್ಟ್ರು ಪ್ರಶ್ನೆ ಕೇಳಿ ಕೇಳಿ ಸುಸ್ಥಾದ್ರು,
ಮೇಷ್ಟ್ರು : ನಿನ್ನ ತಲೆಯಲ್ಲಿ ಬರಿ ಸಗಣಿ ತುಂಬಿದೆ
ಬಾಲು : ಅದಕ್ಕೆ ನೀವು ದಿನಾ ನನ್ನ ತಲೆ ತಿನ್ನೋದಾ ?
*****
ಗಂಡ :ದ್ವೇಷಕ್ಕೂ ಸಂತೋಷಕ್ಕೂ ಏನು ವ್ಯತ್ಯಾಸ?
ಹೆಂಡತಿ : ನಾನು ನಿಮ್ಮನ್ನ ಬಾವಿಗೆ ತಳ್ಳಿದ್ರೆ, ಅದು ದ್ವೇಷ, ನಿವಾಗಿಯೇ ಬಾವಿಗೆ ಬಿದ್ರೆ ಅದು ಸಂತೋಷ.
****
ಜಗ್ಗು ಮತ್ತು ಜಗ್ಗುವಿನ ಮಗ ಎಲ್ಲಿಗೋ ಹೊರಟಿದ್ದರು. ದಾರಿಯಲಿ ಒಂದು ಕೋಳಿ ಮೊಟ್ಟೆ ಇಡ್ತಾ ಇತ್ತು ಅದನ್ನು ನೋಡಿ
ಜಗ್ಗುವಿನ ಮಗ: ಅಪ್ಪ ಅಲ್ಲಿ ನೋಡು ಕೋಳಿ ಮೊಟ್ಟೆ ಇಡ್ತಾ ಇದೆ
ಜಗ್ಗು : ಅದೇನು ಮಹಾ ದೊಡ್ಡ ವಿಷಯ?! ಸುಮ್ನೆ ಬಾರೋ.
ಜಗ್ಗು ಮಗ: ಹಾಗಾದ್ರೆ ನೀನು ಇಟ್ಟು ತೋರಿಸಿ ನೋಡೋಣ…..!
*****
ಡಾಕ್ಟರ್ :ನಿಮಗೆ ಕಿವಿ ಸರಿಯಾಗಿ ಕೇಳಿಸುತ್ತೆ. ಆದರೂ ಕಿವಿ ಕೇಳಲ್ಲ ಅಂತ ಬರ್ಕೊಡಿ ಅಂತೀರಲ್ಲ ಯಾಕೆ ?
ಸೀನ : ಆ ಚೀಟಿನ ನನ್ನ ಹೆಂಡ್ತಿ ತೋರಿಸಿ ಅವಳು ಬೈಯೋದ್ರಿಂದ ತಪ್ಪಿಸಿಕೊಂಡು ನೆಮ್ಮದಿಯಾಗಿರೋಕೆ
*****
ಶೇರಿ : ನನ್ನ ಹೆಂಡತಿಗೆ ಬಯೋಕೆ ಬರಲ್ಲ ಕಣಯ್ಯ
ತಿಮ್ಮ : ಗೊತ್ತು ಬಿಡು ಅದಕ್ಕೆ ನಿನ್ನ ಮೈ ಮೇಲೆ ಆಪಾಟಿ ಗಾಯ