ಜಡ್ಜ್ :ಎಷ್ಟಪ್ಪಾ ನಿನ್ನ ವಯಸ್ಸು?
ಅಪರಾಧಿ : ಇಪ್ಪತ್ತೆರಡು. ಜಡ್ಜ್ : ಕಳದ 15 ವರ್ಷದಿಂದ ಇದೇ ಉತ್ತರ ಹೇಳುತ್ತಾ ಬಂದಿದ್ದೀಯಾ. ಅಪರಾಧಿ: ಹೌದು ಇವರ ಅನರ್, ನಾನು ಗಳಿಗೊಂದು ಉತ್ತರ ಹೇಳುವವನಲ್ಲ ನಂದು ಯಾವಾಗಲೂ ಒಂದೇ ಮಾತು
*****
ಪತ್ನಿ : ಮದುವೆಗೆ ಮುಂಚೆ ಸದಾ ನನ್ನ ಸೌಂದರ್ಯ ಹೊಗಳುತ್ತಿದ್ದವರು ಈಗ ಬಾಯೇ ಬಿಚ್ಚಲ್ವಲ್ರೀ.
ಪತಿ : ಮದುವೆಯಾದ ಮೇಲೆ ಸುಳ್ಳು ಹೇಳಬಾರದು ಅಂತ ತೀರ್ಮಾನಿಸಿದೆ
ಸ್ವರ್ಗ ಸಂಪಾದಿಸಲು ಮೊದಲು ಎಲ್ಲಿ ಏನು ಮಾಡಬೇಕು? ಮೊದಲು ಸಾಯಬೇಕು
***
ಹೆಂಡತಿ :ನೀವು ಬಹಳ ಕೆಟ್ಟವರು ನನ್ನ ಬಂದು ಬಳಗದವರನ್ನು ಯಾವಾಗಲೂ ಇಷ್ಟಪಡುವುದಿಲ್ಲ.
ಗಂಡ :ಇದು ಪೂರ್ತಿ ಸರಿಯಲ್ಲ ನನಗೆ ನಿನ್ನ ಅತ್ತೆ ಮಾವಂದಿರನ್ನು ಕಂಡರೆ ಬಹಳ ಇಷ್ಟ ಆದರೆ ನನ್ನ ಅತ್ತೆ ಮಾವಂದಿರು ಇಷ್ಟ ಆಗಲ್ಲ ಅಷ್ಟೇ
***********
ಮೇಡಂ : ರೀ ಲಲಿತಾ ನಿಮ್ಮ ಮಗನಿಗೆ ಹೆಚ್ಚು ಟಿವಿ ಗೇಮ್ಸ್ ತೋರಿಸಬೇಡ.
ಲಲಿತ : ಯಾಕೆ ಮೇಡಂ?
ಮೇಡಂ : ಏನು ಪ್ರಶ್ನೆ ಕೇಳಿದರು ನಾಲ್ಕು ಆಪ್ಷನ್ ಕೊಡಿ ಅಂತಾನೆ.
ಲಲಿತಾ : ಕೊಡಿ ಮೇಡಂ ಅದರಿಂದ ಅವರ ಜ್ಞಾನ ಹೆಚ್ಚಾಗಬಹುದಲ್ವ
ಮೇಡಂ : ಬಡ್ಕೊಂಡ್ರು ಅಲ್ಲ ನಿಮ್ ತಂದೆ ಹೆಸರೇನು ಅಂತ ಕೇಳಿದ್ರು ನಾಲ್ಕು ಆಪ್ಷನ್ ಕೊಡಿ ಅಂತಾನೆ