ಬಾಲು : ನೋಡು, 10 ದಿನ ಟೈಮ್ ಕೊಡ್ತೀನಿ ಅಷ್ಟರೊಳಗೆ ಐ ಲವ್ ಯು ಅಂದ್ರೆ ಸರಿ ಇಲ್ಲ ಅಂದ್ರೆ…
ಹುಡುಗಿ : ಇಲ್ಲ ಅಂದ್ರೆ ಏನು ಮಾಡ್ತೀಯಾ?
ಬಾಲು : ಇನ್ನೊಂದು 10 ದಿನ ಟೈಮ್ ಕೊಡ್ತೀನಿ ಅಷ್ಟೇ
*******
ಮೇಷ್ಟು ಶಾಲೆಯಲ್ಲಿ ತಮ್ಮ ವಿದ್ಯಾರ್ಥಿಗಳಿಗೆ ಒಂದು ಪ್ರಶ್ನೆಯನ್ನು ಕೇಳಿದರು ಎಮ್ಮೆ ಮತ್ತು ಎಂ.ಎಲ್.ಎ ಗೆ ಏನು ವ್ಯತ್ಯಾಸ ಹೇಳಿರಿ?
ಆಗ ಒಬ್ಬ ಜಾಣ ವಿದ್ಯಾರ್ಥಿ ಎದ್ದು ನಿಂತು ಹೇಳಿದನು… ಅಂತ ದೊಡ್ಡ ವ್ಯತ್ಯಾಸವೇನು ಇಲ್ಲ ಸರ್ ಎಮ್ಮೆ ನಡೆದಾಡಿಕೊಂಡು ಮೈಯುತ್ತೆ, ಎಂಎಲ್ ಎ ಕುತ್ಕೊಂಡೆ ಮೈಯುತ್ತೆ.
*****
ಮೇಷ್ಟು: ಫೋನ್ ಮಾಡಿ ಯಾಕೆ ಬರಲಿಲ್ಲ?
ಹುಡುಗ :ಸರ್ ಪೆನ್ನಲ್ಲಿ ಬರೀಬೇಕೊ,
ಪೆನ್ಸಿಲ್ ನಲ್ಲಿ ಬರಿಬೇಕೊ ನೀವು ಹೇಳಿರಲಿಲ್ಲ ಸರ್,
ಮೇಷ್ಟು: ಕೈಲಿ ಬರೀಬೇಕು ತಿಳೀತಾ? ಕೂತ್ಕೋ !
*****
ರಘು: ನಮ್ಮ ಬಾಸ್ ಗೆ ವಾರ್ನ್ ಹೇಸ್ಟಿಂಗ್ ತಲೆ.
ರವಿ: ಅಷ್ಟು ಚುರುಕ..
ರಘು: ಇಲ್ಲ ಈಗದು ಕೆಲಸ ಮಾಡ್ತಾ ಇಲ್ಲ
******
ಡಾಕ್ಟ್ರು: ಏನ್ರೀ ನೆಗಡಿ ವಾಸಿ ಆಯ್ತಾ? ಈಗ ಹೇಗಿದ್ದೀರಾ?
ರೋಗಿ: ನೆಗಡಿ ಹೋಯಿತು ಆದರೆ ಕೆಮ್ಮು ಬಂತು ಡಾಕ್ಟ್ರೇ.
ಡಾಕ್ಟ್ರು :ಆ ದೇವರು ಯಾವಾಗಲೂ ಹಾಗೆ ಒಂದು ಕೊಟ್ಟು ಇನ್ನೊಂದನ್ನ ಕಿತ್ಕೊತಾನೆ.