ಟೀಚರ್ :ಕೀಟಗಳ ಕಚ್ಚುವಿಕೆಇಂದ ರೋಗ ಹರಡುವುದು ತಡೆಯಲು ಸಾಧ್ಯವೇ ?
ಬಾಲು: ಸಾಧ್ಯ ಸರ್.
ಟೀಚರ್ : ಹೇಗೆ ವಿವರಿಸು…
ಬಾಲು : ನಾವು ಯಾರನ್ನು ಕಚ್ಚದಿದ್ರೆ ಆಯ್ತು ಸರ್…
*****
ಆರನೇ ತರಗತಿಯಲ್ಲಿ ಓದುತ್ತಿದ್ದ ಹರ್ಷ ಪರೀಕ್ಷೆಗೆ ಹೋಗುವ ಮೊದಲು ಗಣೇಶನ ಗುಡಿ ಅರ್ಚಕರ ಕೈಗೆ ಐದು ರೂಪಾಯಿ ಕೊಟ್ಟು ಹೇಳಿದ “ಅಂಕಲ್ ನನ್ನ ಹೆಸರಿನಲ್ಲಿ ಅರ್ಚನೆ ಮಾಡಿ ಈಗಲೇ ಬೇಡ ಮಧ್ಯಾಹ್ನ 2 ಗಂಟೆಗೆ ಇವತ್ತು ಗಣಿತ ಪರೀಕ್ಷೆ ಇದೆ ಬಹಳ ಕಷ್ಟ ಅದಕ್ಕೆ”
******
ಆತ : ನಾನು ಈ ಊರಿಂದ ಟ್ರಾನ್ಸ್ಫರ್ ತಗೊಳ್ಳೋಣ ಅಂತಿದೀನಿ
ಈತ : ಯಾಕೆ ಈ ಊರಲ್ಲಿ ಏನು ತಾಪತ್ರಯ.
ಈತ : ಊರಲ್ಲಿ ಏನಿಲ್ಲ ಆಫೀಸ್ ನಲ್ಲಿ ನನಗೆ ಆಫೀಸ್ ಕೆಲಸಕ್ಕಿಂತ ಬಾಸ್ ಮನೆ ಕೆಲಸ ಮಾಡೋದ್ರಲ್ಲಿ ಸಾಕಾಗಿದೆ