ಬಾಲು : ಒಡೆದ ಹೃದಯದಿಂದ ಪ್ರೀತಿಸ್ತೀಯಾ ಅಥವಾ ಹೃದಯದ ಒಡೆದು ಹೋಗುವವರೆಗೆ ಪ್ರೀತಿಸ್ತೀಯಾ?
ಹುಡುಗಿ : ಹರಿದಿರುವ ಚಪ್ಪಲಿಯಿಂದ ಹೊಡಿಲೋ ಅಥವಾ ಚಪ್ಪಲಿ ಹರಿಯೋತನಕ ಹೊಡಿಲೋ
****
ಯುವತಿ : ಗಜಮುಖನೆ ,ಲಂಬೋದರನೇ ನನಗೆ ಪತಿ ಭಿಕ್ಷೆಯನ್ನು ನೀಡುವೆಯಾ,
ಗಣಪತಿ : ಭಕ್ತಳೇ ಇಂತಹ ವರ ಕೊಡಲು ನನಗೆ ಅಧಿಕಾರವಿಲ್ಲ ನಾನು ಬ್ರಹ್ಮಚಾರಿ ತಂದೆಯನ್ನು ಕೇಳು
****
ಸುರೇಶ : ಸ್ವರ್ಗದ ಬಗ್ಗೆ ನಿಮಗೆ ಕಲ್ಪನೆಯನ್ನು ಮೊದಲ ಬಾರಿಗೆ ಮೂಡಿಸಿದವರು ಯಾರು?
ಗುಂಡಣ್ಣ : ನಾರಾಯಣ
ಸುರೇಶ : ದೇವರ
ಗುಂಡಣ್ಣ : ಅಲ್ಲ ದೇವದಾಸ್ ಬಾರ್ ಅಂಡ್ ರೆಸ್ಟೋರೆಂಟಿನ ವೈಟರ್
****
ಒಂದು ಪ್ರಸಿದ್ಧ ಚರ್ಚ್ ತನ್ನ ಭಾನುವಾರದ ವಿಶೇಷ ಭಾಷಣದ ವಿಷಯವನ್ನು ಸೂಚನಾ ಫಲಕದಲ್ಲಿ ಹೇಗೆ ನಮೂದಿಸಿತ್ತು : ನಿಮಗೆ ನರಕವೆಂದರೆ ತಿಳಿದಿದೆಯೇ ಆದರೆ ಕೆಳಗೆ ಸಣ್ಣಗೆ ಈ ರೀತಿ ಬರೆಯಲಾಗಿತ್ತು ಗೊತ್ತಿಲ್ಲ ಅಂದ್ರೆ ಬಂದು ಶ್ರೀಮಾನ್ ರವರ ಭಾಷಣ ಕೇಳಿ