ಆತ : ಯಾರಾದರೂ ರಾಜಕಾರಣಿ ಆಗಬೇಕಾದರೆ ಇರಬೇಕಾದ ಅರ್ಹತೆ ಏನು?
ಈತ : ಅವರಪ್ಪನೋ ಇಲ್ಲ, ಮಾವನೋ ರಾಜಕಾರಣಿ ಆಗಿರಬೇಕು
*****
ಶರತ್ : ಅಲ್ಲಯ್ಯ ಅವನು ನನ್ನ ಬಳಿ ಮೂರು ದೇವಸ್ಥಾನ, ನಾಲ್ಕು ಚರ್ಚು, ಐದು ಮಸೀದಿ ಇದೆ. ಅಂತಿದ್ದಾನೆ ಅದು ಹೇಗೆ?
ಬಾಬು : ಏನಿಲ್ಲ ಅಲ್ಲೆಲ್ಲ ಅವನು ಮತ್ತು ಅವನ ಕಡೆ ಅವರು ಕೂತು ಬಿಕ್ಷೆ ಬೇಡ್ತಾರೆ ಅಲ್ಲಿ ಬೇರೆ ಯಾರೂ ಹೋಗೋ ಹಾಗಿಲ್ಲ ಅದಕ್ಕೆ.
*****
ಬಂದ ಗಂಡುಗಳನೆಲ್ಲ ಏನೋ ಒಂದು ಕಾರಣ ಹೇಳಿ ಬೇಡವೆನ್ನುತ್ತಿದ್ದ ಮಗಳಿಗೆ ತಾಯಿ ಹೇಳಿದಳು,
ತಾಯಿ : ಮದುವೆ ಅಂದರೆ ಹಳೆಯ ಮನೆಕೊಂಡ ಹಾಗೆ ಮಗು.
ಮಗಳು : ಏನಮ್ಮ ಹಾಗಂದ್ರೆ ?
ತಾಯಿ : ಹಳೆ ಮನೆ ನಮಗೆ ಬೇಕಾದ ಹಾಗೆ ಇರೋದಕ್ಕೆ ಸಾಧ್ಯವೇ! ಮುರಿದು, ಒಡೆಸಿ ಕಟ್ಟಿಕೊಳ್ಳಬೇಕು, ಗಂಡನು ಹಾಗೇನೆ.
“ಗಂಡ-ಹೆಂಡತಿ ಮದುವೆಯಾದ ಮೇಲೆ ಒಂದಗ್ತಾರೆ ಆದರೆ…” “ಮತ್ತೆ ಬೇರೆ ಆಗ್ತಾರಾ ?” “ಅಲ್ಲ, ಯಾವ ಒಂದು ಅನ್ನೋ ಪ್ರಶ್ನೆ ಬಂದಾಗ ಅವರಿಬ್ಬರ ಮಧ್ಯೆ ವಿರಸ ಶುರುವಾಗಿಬಿಡುತ್ತದೆ”