ಡಾಕ್ಟರ್ : ಯಾಕಪ್ಪ ಹೆಣ ನೋಡಿ ನೀನು ನಗ್ತಾ ಇದ್ದೀಯ?
ಬಾಲು : ಅವರು ಯಾಕೆ ಸತ್ತು ಹೋಗಿದ್ದಾರೆ ಅಂತ ನಂಗೊತ್ತು!
ಡಾಕ್ಟರ್ : ಯಾಕೆ ? ಬಾಲು : ಯಾಕೆಂದರೆ ಅವರ ಮೂಗಿಗೆ ಹತ್ತಿ ತುರುಕಿದ್ದಾರೆ ನೋಡಿ ಅದಕ್ಕೆ…
***
ಗಂಡ ಹೆಂಡತಿ ಜಗಳವಾಡುತ್ತಿದ್ದುದನ್ನು ಅವನ ಸ್ನೇಹಿತ ಆಕಸ್ಮಾತ್ ನೋಡಿಬಿಟ್ಟ ಮರುದಿನ ಮಿತ್ರ ಸ್ನೇಹಿತನನ್ನು ಕೇಳಿದ.
ಮಿತ್ರ : ಹೆಂಡತಿಯೊಡನೆ ಜಗಳವಾಡುತ್ತಿದ್ದೆಯಲ್ಲಾ ಕೊನೆಗೆ ಏನಾಯ್ತು?
ಅವನು : ಅವಳು ನೆನ್ನೆದುರು ಮೊಣಕಾಲೂರಿದಳು.
ಮಿತ್ರ : ಅದು ಹೇಗೆ ಸಾಧ್ಯವಾಯಿತು? ಮಾರಾಯ.
ಅವನು: ನಾನು ಮಂಚದ ಕೆಳಗೆ ನುಸೂಳಿದ್ದೆ.
****
“ವಿಶ್ವ ನಾನು ಆಯೋಗ್ಯ ಅಂತ ಈ ರಸ್ತೆ ಮಂದಿಗೆಲ್ಲ ನೀನು ಹೇಳಿಕೊಂಡು ಬಂದೆಯಂತೆ. ಹೌದಾ?” ರಾಮಣ್ಣ ಗುಡುಗಿದ.
“ಹೌದು, ಆದರೆ ಜನ ಏನು ಕೇಳಿದರು ಗೊತ್ತ ಇದು ಗುಟ್ಟಾದ ವಿಷಯ ನಿನಗೆ ಹೇಗೆ ಗೊತ್ತಾಯ್ತು, ಅಂದ್ರು.