ಪ್ರಸಿದ್ಧ ನಾಟಕಕಾರರ ಜಾರ್ಜ್ ಬರ್ನಾಡ್ ಷಾ ಒಮ್ಮೆ ಹೊಸ ನಾಟಕಕಾರ ರಚನೆಯೊಂದರಲ್ಲಿ ತೊಡಗಿದ್ದಾಗ ಇಬ್ಬರು ಸೇವಕರ ನಡುವೆ ನಡೆಯುತ್ತಿದ್ದ ಮಾತುಕತೆ ಅವನಿಗೆ ಕೇಳಿಸಿತು
ಒಬ್ಬ: ಅವರು ಬಿಜಿಯಾಗಿದ್ದಾರ?
ಇನ್ನೊಬ್ಬ : ಇಲ್ಲ ಸುಮ್ನೆಬರೀತಿದ್ದಾರೆ ಅಷ್ಟೇ.
****
ಆತ : ಹಸಿವು ನಿದ್ದೆ ಬಾಯಾರಿಕೆಗಳು ಇವುಗಳಿಂದ ಹೊರತಾಗಿರುವ ಭಗವಂತನಿಗೆ ಬಗೆ-ಬಗೆ ಭಕ್ಷ ಮಾಡಿ ತಿನ್ನು ಅಂತ ನೈವೇದ್ಯ ಮಾಡೋದು ಸರಿಯೇ.
ಈತ : ಇಲ್ಲದಿದ್ದರೆ ನಮಗೆ ರುಚಿ ರುಚಿಯಾದ ಭಕ್ಷ ತಿನ್ನೋಕೆ ಎಲ್ಲಿ ಸಿಗುತ್ತಿತ್ತು
****
ರಘು ಹೊಸ ಕುಕ್ಕರ್ ತೆಗೆದುಕೊಂಡು ಮೂರನೇಯ ದಿನವೇ ಅದನ್ನು ತಂದು ಅಂಗಡಿಯವನಿಗೆ ವಾಪಸ್ ಕೊಟ್ಟ.
ಅಂಗಡಿಯವನು : ಯಾಕೆ ಸರ್ ಏನಾಯ್ತು?
ಜಗ್ಗು: ಮನೆಯಲ್ಲಿ ಮದುವೆಗೆ ಬಂದಿರೋ ಮಗಳಿದ್ದಾಳೆ ನೋಡಿದರೆ ಈ ಹಾಳು ಕುಕ್ಕರ್ ವಿಶೇಲ್ ಹೊಡಿತಾ ಇದೆ!
****
“ಬಾಲ್ಯದಲ್ಲಿಯೇ ಕೆಲವು ಆಸೆಗಳು ವಯಸ್ಸಾದಾಗ ಈಡೇರುವಂತೆ ಅಂತದ್ದು ನಮ್ಮ ಜೀವನದಲ್ಲೇನಾದರೂ ಸಂಭವಿಸಿದೆಯೇ” ಪತ್ರಕರ್ತ ಸುಪ್ರಸಿದ್ಧ ಚಿತ್ರ ನಟನೊಬ್ಬನಿಗೆ ಪ್ರಶ್ನಿಸಿದ.
“ಹೌದು, ಬಾಲ್ಯದಲ್ಲಿ ಕ್ಷೌರ ಮಾಡಿಸಿಕೊಳ್ಳಬೇಕಾಗಿಲ್ಲ ನನಗೆ ಬಕ್ಕ ತಲೆ ಇದ್ದಿದ್ದರೆ ಎಷ್ಟು ಚೆನ್ನಾಗಿರುತ್ತಿತ್ತು ಎನಿಸುತ್ತಿದ್ದು ಈಗ ಅದು ನಿಜವಾಗಿದೆ..!