ಮನೆ ಹಾಸ್ಯ ಹಾಸ್ಯ

ಹಾಸ್ಯ

0

ಹೆಂಡತಿ : ರೀ ನೀವು ಎಸ್.ಎಂ.ಎಸ್ ಆಗಿದ್ದರೆ ನಾನು ನಿಮ್ಮನ್ನು ಸೇವ್ ಮಾಡಿಕೊಳ್ಳುತ್ತಿದ್ದೆ.

ಜಗ್ಗು : ಡಾರ್ಲಿಂಗ್ ನೀನು ರಿಂಗ್ಟೋನ್ ಆಗಿದ್ದರೆ ನಾನು ವಾರಕ್ಕೊಮ್ಮೆ ಬದ್ಲಾಯಿಸ್ತಿದ್ದೆ.

***

ಹುಚ್ಚನೊಬ್ಬ ಮದ್ವೆ ಮನೆಯ ಮುಂದೆ ರಸ್ತೆಯಲ್ಲಿ ಮಲಗಿ ಸೊಗಸಾಗಿ ಹಾಡುತ್ತಿದ್ದ ಎಲ್ಲರೂ ಭೇಷ್ ಎಂದರು.

ಅವನು ಮುಗ್ಗಲಾಗಿ ಹಾಡಲಾರಂಭಿಸಿದ.

“ಬೋರಲು ಯಾಕೆ ಮಲಗಿದೆ?” ಯಾರೋ ಕೇಳಿದರು.

 “ರೆಕಾರ್ಡ್ ತಿರುವಿ ಹಾಕಿದ್ದೀನಿ” ಎಂದ ಹುಚ್ಚ.

****

ಈ ಹಣಕಾಸು ಸಂಸ್ಥೆ ತನ್ನ ಸದಸ್ಯರಿಗೆ ಮರಣ ನಂತರ ಸಿಗುವ ಕೆಲಸ ಆಕರ್ಷಕ ಸೌಲಭ್ಯಗಳನ್ನು ಪ್ರಕಟಿಸಿತು. ಅದರಲ್ಲಿ ಅವನು ಸತ್ತ ನಂತರ ಬಾಕಿ ಇರುವ ಹಣವನ್ನು ಕಟ್ಟಬೇಕಾಗಿಲ್ಲ ಎಂಬುದು ಒಂದು.