ಅವನು : ನಿನ್ನ ಅಡಿಗೆ ನಮ್ಮಮ್ಮ ಮಾಡಿದ ಅಡುಗೆಯಾಂತಿಲ್ಲ..
ಅವಳು : ಹೌದಾ, ನಿನ್ನ ಸಂಪಾದನೆ ನನ್ನ ಅಪ್ಪನ ಸಂಪಾದನೆ ಅಂತಿಲ್ಲ ಬಿಡು..
****
ಜಡ್ಜ್ : ನೀನು ಕಾರು ಕದಿದ್ದನ್ನು ನೋಡಿದ 30 ಜನ ಸಾಕ್ಷಿಗಳು ಇದ್ದಾರೆ. ಇದಕ್ಕೆ ಏನು ಹೇಳ್ತೀಯಾ?
ಅಪರಾಧಿ : ಇರಬಹುದು, ನಾನು ಕದ್ದಿದ್ದನ್ನು ನೋಡಿಲ್ಲದ 60 ಸಾಕ್ಷಿಗಳನ್ನು ಒದಗಿಸಬಲ್ಲೆ.
***
ಕಥೆಗಾರ : ಹೇಗಿದೆ ಸಾರ್, ನನ್ನ ಕಥೆ. ಇದನ್ನು ಧಾರವಾಹಿ ಮಾಡಬಹುದಾ?
ನಿರ್ಮಾಪಕ : ಮಾಡಬಹುದು…ಕಥೆ ಚೆನ್ನಾಗಿದೆ.
ಕಥೆಗಾರ : ಒಳ್ಳೆದು ಸರ್. ಈ ಕಥೆಗೆ ಸ್ವಲ್ಪ ಎಲಾಸ್ಟಿಕ್ ರಬ್ಬರ್ ಗಮ್ಮು ಮಿಕ್ಸ್ ಮಾಡಿ ಕೊಡ್ತೀನಿ.
ನಿರ್ಮಾಪಕ : ಯಾಕೆ..?
ಕಥೆಗಾರ : ಸಾವಿರಾರು ಎಪಿಸೋಡ್ ತನಕ ಕಥೆ ಎಳಿಬೇಕಲ್ಲ.















