ಒಬ್ಬ ಭವಿಷ್ಯವಾದಿಯು ಬೋರ್ಡಿನ ಮೇಲೆ ಹೇಗೆ ಬರೆದಿದ್ದ: ನೀವು ಕೇಳುವ ಎರಡು ಪ್ರಶ್ನೆಗಳಿಗೆ ರೂಪಾಯಿ 100 ಮಾತ್ರ. ಒಬ್ಬ ಬಂದು ಜ್ಯೋತಿಷಿಯನ್ನು ಕೇಳಿದ “ಕೇವಲ ಎರಡು ಪ್ರಶ್ನೆಗಳಿಗೆ ರೂ.100 ತುಂಬಾ ಹೆಚ್ಚಲ್ಲವೆ”?
ಜ್ಯೋತಿಷಿ ಹೇಳಿದ “ ಹೌದು ನೀವು ನಿಮ್ಮ ಎರಡನೇ ಪ್ರಶ್ನೆಯನ್ನು ಬೇಗ ಕೇಳಿ ಮುಗಿಸಿರಿ.
****
ನರ್ಸ್ : ಡಾಕ್ಟೇ, ಈ ರೋಗಿಯ ಆಪರೇಷನ್ ಆಗಿ 5 ಘಂಟೆಯಾದರೂ ಇನ್ನೂ ನೀರೇ ಕುಡಿದಿಲ್ಲ. ಡಾಕ್ಟರ್
ಜಗ್ಗು : ಹಾಗಾದ್ರೆ ಅವನ ಬಾಯಿಗೆ ಸ್ವಲ್ಪ ಉಪ್ಪು ಹಾಕಿ. ಉಪ್ಪು ತಿಂದವನು ನೀರು ಕುಡಿಲೇಬೇಕು.
****
ರಾಜು : ಒಬ್ಬ ಹುಡುಗಿನ ಮದುವೆಗೆ ಒಪ್ಪಿಸೋದು ಹೇಗೋ ?
ಸುರೇಶ : ಅವಳಿಗಿಷ್ಟವಿಲ್ಲವಾದರೆ, ಒಪ್ಪಿಸಲು ಸಾಧ್ಯವೇ ಇಲ್ಲ.
ರಾಜು : ಅವಳಿಗಿಷ್ಟವಿದ್ದರೆ ?
ಸುರೇಶ : ಮದುವೆಯಿಂದ ತಪ್ಪಿಸಿಕೊಳ್ಳೋಕೆ ನಿನಗೆ ಏನು ಮಾಡಿದರು ಸಾಧ್ಯವಿಲ್ಲ.