ಶಿಮ್ಲಾದಿಂದ ಉಲ್ಲನ್ ದಾರ ತಂದಿದ್ದ ವಿಶಾಲೂ ಎಡಬಿಡದೆ ನಿಟ್ಟಿಂಗ್ ಮಾಡುತ್ತಿದ್ದಳು. “ಏನುಹಾಕ್ತಾ ಇದ್ದೀಯ ?” ವಿಶ್ವ ಕೇಳಿದ. “ಗೊತ್ತಿಲ್ಲ ಕಣ್ರೀ.. ಹೆಣಿಗೆ ಪುಸ್ತಕ ಕಳೆದು ಹೋಗಿದೆ ದಾರ ಮುಗಿಯುವವರೆಗೆ ಹಾಕ್ತಿರ್ತೀನಿ.”
***
ಟೀಚರ್ : ʼಬೆನ್ನು ಮೂಳೆʼ ಎಂದರೇನು ವಿವರಿಸಿ ?
ವಿದ್ಯಾರ್ಥಿ : ಬೆನ್ನು ಮೂಳೆ ಒಂದು ಉದ್ದನೆಯ ಮೂಳೆ, ಅದರ ಒಂದು ತುದಿಗೆ ನಿಮ್ಮ ತಲೆ ಇರುತ್ತದೆ. ಅದರ ಇನ್ನೊಂದು ತುದಿಯಲ್ಲಿ ನೀವು ಕೂತಿರುತ್ತೀರಿ..
***
ಸುಬ್ಬಿ : ಏನೇ ನಿಮ್ಮ ಯಜಮಾನರಿಗೆ ಪ್ರಮೋಷನ್ ಬಂತಂತೆ.
ಸರಳ : ಹೌದು ಕಣೆ, ದಿನ ಇಬ್ಬರಿಗೆ ಅಡಿಗೆ ಮಾಡ್ತಿದ್ರು, ಇವತ್ತಿಂದ ನಾಲ್ಕು ಜನಕ್ಕೆ ಮಾಡಬೇಕು. ನಮ್ಮಮ್ಮ ನಮ್ಮಪ್ಪ ಬರ್ತಿದ್ದಾರೆ.
***
“ಇದನ್ನು ಓದಿದವನು ಮೂರ್ಖ” ಎಂದು ಗೋಡೆಯ ಮೇಲೆ ಬರೆದಿತ್ತು. ಓದಿದ ಕಿಟ್ಟುಗೆ ಅತಿ ಸಿಟ್ಟು ಬಂತು! ಕೂಡಲೇ ಅಲ್ಲೇ ಬಿದ್ದಿದ್ದ ಇದ್ದಲು ಚೂರನ್ನು ತೆಗೆದುಕೊಂಡ ಬರಹ ಕೆಳಗೆ ಇದನ್ನು ಬರೆದವನು ಮಹಾ ಮೂರ್ಖ ಇಂದು ಬರೆದ.
***
ಕೆಲಸದಾಳು : ಸಾರ್ ಮಗು ಜಿರಳೆಯನ್ನು ಬಾಯಿಗೆ ಹಾಕಿಕೊಂಡಿತು.
ಜಗ್ಗು : ಅಯ್ಯೋ ಹೌದಾ, ಬೇಗ ಡಾಕ್ಟರನ ಕರಿಯಬೇಕಿತ್ತು.
ಕೆಲಸದಾಳು : ನೀವು ಟೆನ್ಶನ್ ಮಾಡ್ಕೋಬೇಡಿ ಸರ್, ನಾನಾಗಲೇ ಮಗುವಿಗೆ ಜಿರಳೆ ಔಷಧಿ ಕೊಡಿಸಿದ್ದೇನೆ.