ಶಂಕರ : ಏನು ರಾಮು ಹೋಗಿ ಹೋಗಿ ಅವಳನ್ನು ಮದುವೆ ಮಾಡಿಕೊಳ್ಳುತ್ತಿದ್ದೀಯ ?
ರಾಮು : ಅವಳು ನನ್ನ ಪ್ರಾಣ ಉಳಿಸಿದವಳು,
ಶಂಕರ : ಹೇಗೆ?
ರಾಮು : ನಾವಿಬ್ಬರು ಒಟ್ಟಿಗೆ ಇದ್ದುದನ್ನು ನೋಡಿ ಅವರಪ್ಪ ಮಚ್ಚು ಹಿಡಿದು ಬಂದಿದ್ದರು, ನನ್ನ ಕೊಲ್ತೀನಂತ, ಇವಳು ಕೊಲ್ಲಬೇಡ ಅಂತ, ಒಪ್ಪಿಸಿ ನನ್ನ ಪ್ರಾಣ ಉಳಿಸಿದಳು.
***
“ಮೇಡಂ, ಇದು ಟ್ಯೂ ಇನ್ ವನ್ ಔಷಧಿ ಮನುಷ್ಯರಿಗೂ ಕೂಡಿಸಬಹುದು, ನಾಯಿಗಳಿಗೂ ಕುಡಿಸಬಹುದು” ಅಂಗಡಿಯತಾ ಹೇಳಿದ.
“ಹೌದಾ! ಹಾಗಿದ್ರೆ ಒಂದೇ ಬಾಟಲ್ ಸಾಕು ನಾಯಿಗೆ ಹಾಕಿ ಉಳಿದರೆ ಆಮೇಲೆ ನಮ್ಮವರಿಗೆ ಕೊಡ್ತೀನಿ.
***
ಟೀಚರ್ : ಚೈನಾ ಅಥವಾ ಚಂದ್ರ ಇವೆರಡರಲ್ಲಿ ನಮ್ಮಿಂದ ಅತ್ಯಂತ ದೂರದಲ್ಲಿ ಇರುವುದು ಯಾವುದು?
ವಿದ್ಯಾರ್ಥಿ : ಚೈನಾ.
ಟೀಚರ್ : ಯಾಕೆ?
ವಿದ್ಯಾರ್ಥಿ : ಏಕೆಂದರೆ ನಾವು ಎಲ್ಲಾ ಶುಭ್ರ ರಾತ್ರಿಗಳಲ್ಲೂ ಚಂದ್ರನನ್ನು ಕಾಣಬಹುದು, ಆದರೆ ಚೀನಾ ನಮಗೆ ಕಾಣಿಸುವುದಿಲ್ಲ.
***
ನಂಜುಂಡ : ಪ್ರೀತಿಗೂ, ಮದುವೆಗೂ ಅಂತರ ಹೆಚ್ಚಾದರೆ ಏನಾಗುತ್ತೆ?
ಪ್ರಭು : ಏನಿಲ್ಲಾ ಮದುವೆಗೂ ಮಗುಗೂ ಅಂತರ ಕಡಿಮೆಯಾಗುತ್ತೆ.