ಮನೆ ಹಾಸ್ಯ ಹಾಸ್ಯ

ಹಾಸ್ಯ

0

ಟೀಚರ್ : ನಾನು ನಿನ್ನ ಒಂದು ಜೇಬಿಗೆ ಕೈ ಹಾಕಿದಾಗ 75 ಸಿಕ್ಕಿತು, ಮತ್ತೊಂದು ಜೇಬಿನಲ್ಲಿ ಕೈ ಹಾಕಿ ತೆಗೆದಾಗ 75 ಸಿಕ್ಕಿತು ಅಂತ ಭಾವಿಸುವ ಒಟ್ಟು ಎಷ್ಟಾದವು?

ರಾಮು :  ಅದು ನನ್ನ ಜೇಬಲ್ಲ ಮೇಡಂ. 

***

ನಾಗ : ಏನಿವತ್ತು ಅಪರೂಪವಾಗಿ ಮನೆಗೆ ಮಲ್ಲಿಗೆ ಹೂವು ತಗೊಂಡು ಹೋಗ್ತಿದ್ದೀಯ ? ಜೊತೆಗೆ ಕಿವಿ ಮೇಲು ಹೂ ಇಟ್ಕೊಂಡಿದ್ದೀಯ?

ರಾಜ : ಏನಿಲ್ಲಾ ನನ್ ಹೆಂಡ್ತಿಗೆ  ಗುಂಡ್ ವಾಸನೆ ಗೊತ್ತಾಗದಿರಲಿ ಅಂತ.

***

ಹೋಟೆಲ್ ಮಾಲೀಕನಿಗೂ ಪಕ್ಕದ ಆಸ್ಪತ್ರೆ ಡಾಕ್ಟರ್ ಗೆ ಒಂದೇ ಕಾಲಕ್ಕೆ ತಲೆನೋವು ಬರಬೇಕೇ? 

ಹೋಟೆಲಿನ ಮಾಲೀಕ ತಲೆನೋವಿನ ಗುಳಿಗೆ ನುಂಗಲು ಡಾಕ್ಟರ್ ಅಲ್ಲಿಗೆ ಹೋದ,

ಡಾಕ್ಟರ್  ತಲೆ ನೋವನ್ನು ಶಮನಮಾಡಿಕೊಳ್ಳಲು ಕಾಫಿ ಕುಡಿಯಲು ಹೋಟೆಲಿಗೆ ಹೋದರು.

***

“ನಾನು ಮದುವೆಯಾದ ಮೇಲೆ ನನ್ನಲ್ಲಿ ಗುಂಡಿ ಇಲ್ಲದ ಶರ್ಟ್ ಆಗಲಿ, ಕೊಳೆಯಾದ ನೆಟ್ ಬನಿಯಾನ್ ಗಳಾಗಲಿ ಇಲ್ಲ”.

“ನೀನೇ ಅದೃಷ್ಟವಂತ ಕಣಯ್ಯ”. “ಶರ್ಟಿನ ಗುಂಡಿ ಹೊಲಿಯೋದು, ಬಟ್ಟೆ ಸಾಫ್ ಮಾಡೋದು, ಇಸ್ತ್ರಿ ಮಾಡೋದು, ಎಲ್ಲಾ ಕೆಲಸಗಳನ್ನು ನನ್ನ ಹೆಂಡ್ತಿ ನನಗೆ ಹೇಳಿಕೊಟ್ಟಿದ್ದಾಳೆ”.