ಕಮಲಮ್ಮ : “ನಿಮ್ಮ ಯಜಮಾನರು ಹಣಕ್ಕಾಗಿ ಮೂರೆಲೆ ಆಟ ಆಡ್ತಾರ, ಸರೋಜಮ್ಮ..?”
ಸರೋಜಮ್ಮ : ಇಲ್ರಿ ಕಮಲಮ್ಮ, ಬೇರೆಯವರು ಹಣಕ್ಕೋಸ್ಕರವಾಗಿ ಇವರ ಹತ್ತಿರ ಬಂದು ಮೂರೆಲೇ ಆಡಿ ಹೋಗ್ತಿದ್ದಾರೆ.
***
ಮಗು : ಅಮ್ಮ, ಈ ಫೋಟೋದಲ್ಲಿ ನೀನು ಮತ್ತು ಅಪ್ಪ ಒಬ್ಬರೇ ಇದ್ದೀರಲ್ಲ! ನಾನ್ಯಾಕೆ ಇಲ್ಲ?
ತಾಯಿ : ಈ ಫೋಟೋ ನಮ್ಮ ಮದುವೆಯಲ್ಲಿ ತೆಗೆದದ್ದು, ಆಗ ನೀನು ಹುಟ್ಟಿರಲಿಲ್ಲ.
ಮಗು : ನಾನು ಹುಟ್ಟುವವರೆಗೂ ಕಾದಿದ್ದು, ಆಮೇಲೆ ಮದುವೆ ಮಾಡಿಕೊಳ್ಳಬಾರದಾಗಿತ್ತು? ಆಗ ನಾನು ಫೋಟೋದಲ್ಲಿ ಇರುತ್ತಿದ್ದೆ.
***
ಬಾಲು : ನಿನಗೆ ಏನು ಬೇಕು ಡಾರ್ಲಿಂಗ್ ?
ಪ್ರೇಯಸಿ : ದೋಸೆ, ಕೋಲಾ ಮತ್ತು ನೀನು.
ಬಾಲು : ನಿಜಾನಾ ಚಿನ್ನ?
ಪ್ರೇಯಸಿ : ಹೌದು, ದೋಸೆ ತಿನ್ನೋಕೆ, ಕೋಲ ಕುಡಿಯೋಕೆ ಮತ್ತು ನೀನು ಬಿಲ್ ಕೊಡಲಿಕ್ಕೆ….
***
“ಇಂದಿನ ಯುವತಿಯರಿಗೂ ಮೂರು ದಶಕದ ಹಿಂದಿನ ಯುವತಿಯರಿಗೂ ಏನು ವ್ಯತ್ಯಾಸ” ಕೇಳಿದ ಬಾಸು.
“ಹೆಚ್ಚೇನಿಲ್ಲ. ಮೂರು ದಶಕದ ಹಿಂದಿನ ಯುವತಿ ಏನೇನು ಮಾಡಬೇಕು ಅಂತ ಮನಸ್ಸಿನಲ್ಲಿ ಅಂದುಕೊಳ್ಳುತ್ತಿದ್ದಳೋ ಅದನ್ನು ಇಂದಿನ ಯುವತಿ ಮಾಡ್ತಾಳೆ ಅಷ್ಟೇ….”