ಗುಂಡ : ಇವತ್ತು ಯಾಕೋ ಎದ್ದ ಟೈಮ್ ಚೆನ್ನಾಗಿಲ್ಲ.
ಗೆಳೆಯ : ಯಾಕೋ ಏನಾಯ್ತು? ಗೆಳೆಯ ಕೇಳಿದ.
ಗುಂಡ : ಒಬ್ಬ ಹುಡುಗಿಗೆ ಮುತ್ತು ಕೊಟ್ಟೆ ಅಂತ ಕೋರ್ಟಿನಲ್ಲಿ 200 ರೂಪಾಯಿ ದಂಡ ವಿಧಿಸಿದರು.
ಗೆಳೆಯ : ಹುಡುಗಿಗೆ ಮುತ್ತು ಕೊಟ್ಟೆಯಲ್ಲ. ಅಂದಮೇಲೆ ದಂಡವೆ ಅಲ್ಲವೇ ?
ಗುಂಡ : ಆಮೇಲೆ ನ್ಯಾಯಾಧೀಶರು ಹುಡುಗಿನ ನೋಡಿದರೂ ಇಂತಹ ಹುಡುಗಿಗೆ ಮುತ್ತು ಕೊಡಬೇಕಾದರೂ ಕುಡಿಯದೇ ಇರಬೇಕು. ಅಂತ ಮತ್ತು 300 ದಂಡ ವಿಧಿಸಿದರು.
***
“ಆಂಟಿ, ನಿಮ್ಮ ನಾಯಿ ಅದಷ್ಟು ಚುರುಕಾಗಿದೆ! ಅರೆ ! ಏನಿದು? ಬೆಲ್ಟ್ ಮೇಲೆ ಸಂಖ್ಯೆ ಇದೆ?”
“ಅದು ಪೋಲೀಸ್ ಇಲಾಖೆಯಲ್ಲಿ ಕೆಲಸಕ್ಕೆ ಇದೆ”
“ಆದರೆ ನೋಡೋಕೆ ಹಾಗೆ ಕಾಣಿಸ್ತಿಲ್ವಲ್ಲ”
“ಅದು ಸಿ.ಐ.ಡಿ ವಿಭಾಗದಲ್ಲಿದೆ”.
***
ಅವನು : ದಶರಥ ಕೈಕೆಯಿಗೆ ವರ ಕೊಟ್ಟ ಹಾಗೆ ನೀನು ನನ್ನ ತಂದೆಗೆ ಮೂರು ವರದಂತಹ ಮಾತು ಕೊಟ್ಟೆ ಅಂದ್ಯಲ್ಲ ಯಾವುದು? ಇವನು : ಮದುವೆಯಾದ ಮೇಲೆ ಹೆಂಡತಿಗೆ ಹೆದರಲ್ಲ, ಸಂಬಳ ತಗೊಂಡುಹೋಗಿ ಹೆಂಡತಿ ಕೈ ಕೊಡಲ್ಲ,
ಮತ್ತೆ ಮೂರನೇದು
ಮದುವೆಯಾಗಲ್ಲ ಅಂತ.
***
ಒಬ್ಬಳು : ನನ್ನ ಗಂಡನಿಗೆ ಯಾವುದೇ ವಿಷಯವನ್ನು ಕೊಡಿ ಗಂಟೆಗಟ್ಟಲೆ ಮಾತನಾಡಬಲ್ಲರು.
ಇನ್ನೊಬ್ಬಳು : ನನ್ನ ಗಂಡನಿಗಂತೂ ವಿಷಯಾನೆ ಬೇಕಾಗಿಲ್ಲ ದಿನವಿಡೀ ಮಾತನಾಡುತ್ತಲೇ ಇರುತ್ತಾರೆ.
***
ಡಾಕ್ಟರ್ : ಹೇಗಿದ್ದೀರಿ ?
ಜಗ್ಗು: ಪರವಾಗಿಲ್ಲ, ಆದ್ರೆ ತುಂಬಾ ಬೇಜಾರಾಗುತ್ತೆ ಸರ್.
ಡಾಕ್ಟರ್ : ಯಾಕೆ?
ಜಗ್ಗು : ನರ್ಸ್ ನ ಸಿಸ್ಟರ್ ಅಂತ ಕರೆಯೋದು.