“ಏನ್ಸಾರ್ ಇದು. ಒಂದೇ ಡೇಟಿನ ದಿನಪತ್ರಿಕೆಗಳು ಮೂರು-ನಾಲ್ಕು ಕಾಪಿಗಳು ಇವೆಯಲ್ಲ ?”
ವಿಶ್ವ ಆಶ್ಚರ್ಯದಿಂದ ರಾಯರನ್ನು ಕೇಳಿದ.
“ಎಲ್ಲಾ ನಮ್ಮ ನಾಯಿ ಕೆಲಸ. ಈ ರಸ್ತೆಯಲ್ಲಿ ಯಾರದೇ ಮನೆ ಮುಂದೆ ದಿನಪತ್ರಿಕೆ ಬಿದ್ದಿದ್ದರೂ ಕಚ್ಚಿಕೊಂಡು ಬಂದುಬಿಡುತ್ತದೆ”.
***
ಗೀತಾ : ಸ್ವಾಭಿಮಾನದ ಪರಾಕಾಷ್ಟೇ ಯಾವುದು?
ಸೀತ : ಗಂಡನನ್ನು ನಾಯಿಯಷ್ಟೇ, ನಾಯಿಯನ್ನು ಗಂಡನಂತೆ ಪ್ರೀತಿಸುವುದು.
***
ಪತ್ನಿ : ಪ್ರಿಯಾ, ಈ ಬೆಳದಿಂಗಳು ಜನರನ್ನು ಹುಚ್ಚರನ್ನಾಗಿಸುತ್ತೆ ಅಲ್ಲವೇ ?
ಪತಿ : (ನಿಟ್ಟುಸಿರು ಬಿಡುತ್ತಾ) ಹೌದು ಪ್ರಿಯೆ ಇಂಥಾ ಒಂದು ರಾತ್ರಿಯಲ್ಲೇ ನಾನು ನಿನ್ನನ್ನು ಮದುವೆಯಾಗುತ್ತೇನೆ ಎಂದು ಮಾತು ಕೊಟ್ಟಿದ್ದು.
***
ಮಂತ್ರಿಯೊಬ್ಬರು ಹುಚ್ಚರ ಆಸ್ಪತ್ರೆಯ ಸಂದರ್ಶನಕ್ಕಾಗಿ ಆಗಮಿಸಿದ್ದರು. ಆಗ ಅಲ್ಲಿದ್ದ ಹುಚ್ಚನೊಬ್ಬ ಮಂತ್ರಿಯವರನ್ನು ಪ್ರಶ್ನಿಸಿದ -“ನೀವು ಯಾರು?”
“ನಾನು ಈ ರಾಜ್ಯದ ಆರೋಗ್ಯ ಮಂತ್ರಿ”
“ಇಲ್ಲಿಗೆ ನಾನು ಹೊಸದಾಗಿ ಬಂದಾಗ ನಾನು ಹೀಗೆ ಹೇಳುತ್ತಿದ್ದೆ”.
***
ಟೀಚರ್ : ಒಂದು ಸಾವಿರ ಕೆ.ಜಿ. ಸೇರಿದರೆ ಒಂದು ಟನ್ ಆಗುತ್ತೆ, ಹಾಗಾದ್ರೆ 3,000 ಕೆಜಿ ಸೇರಿದರೆ ಏನಾಗುತ್ತೆ?
ಬಾಲು : ಟನ್… ಟನ್… ಟನ್…