ಮೆಡಿಕಲ್ ವಿದ್ಯಾರ್ಥಿಯೊಬ್ಬ ಪ್ರೊಫೆಸರ್ ಅನ್ನು ಕೇಳಿದ.
ಸರ್ ತುಂಬಾ ಮರೆವು ಇರುವ ರೋಗಿಗಳನ್ನು ಏನು ಚಿಕಿತ್ಸೆ ಕೊಡಿಸಬೇಕು? “ಚಿಕಿತ್ಸೆ ಬಗ್ಗೆ ಹೇಳ್ತೀನಿ”, ಪ್ರೊಫೆಸರ್ ಹೇಳಿದರು.
“ಆದರೆ ಅದಕ್ಕಿಂತ ಮುಂಚೆ ಒಂದು ಮಾತು ನೆನಪಿಟ್ಟುಕೋ. ಮರೆವಿರುವ ರೋಗಿಗಳಿಗೆ ಚಿಕಿತ್ಸೆ ನೀಡುವ ಮೊದಲೇ ಫೀಜನ್ನು ಮುಂಗಡವಾಗಿಪಡೆಯಬೇಕು.
**
ಅಮ್ಮ : ಪುಟ್ಟ, ಸರ್ಕಸ್ ಇಷ್ಟವಾಯಿತೆನೋ…?
ಪುಟ್ಟ : ಹೂ, ಕಣಮ್ಮ. ಆದರೆ ಆ ಹೆಂಗಸಿನ ಸುತ್ತ ಕತ್ತಿ ಎಸಿತಾನಲಮ್ಮ, ಆಟ ಸರಿಯಾಗಿ ಅರ್ಥನೇ ಆಗ್ಲಿಲ್ಲ.
ಅಮ್ಮ : ಯಾಕೆ? ಪುಟ್ಟ : ಪ್ರತಿಸಲ ಅವನು ಗುರಿತಪ್ಪಿಸ್ತಾನೆ ಅಲ್ವಾಮ್ಮ.!?
***
ಅವನು : ನಿನ್ನೆ ನಮ್ಮ ಆಫೀಸಿನಲ್ಲಿ ನಿನಗೆ ಸನ್ಮಾನ ಇಟ್ಟುಕೊಂಡಿದ್ದರಂತೆ ಯಾಕೆ ?
ಇವನು : ಉಳಿತಾಯ ಮಾಡಿದ್ದಕ್ಕೆ.
ಅವನು : ಉಳಿತಾಯ ಮಾಡಿದ್ದಕ್ಕೂ ಸನ್ಮಾನ ಮಾಡ್ತಾರಾ?
ಇವನು : ಅಲ್ವೇ ಮತ್ತೆ, ನನ್ನ ಹೆಂಡ್ತಿತರ ಸಖತ್ ಖರ್ಚು ಮಾಡೋ ಹೆಂಡತಿ ಇದ್ದು, ಐದು ವರ್ಷದಲ್ಲಿ ಒಂದು ಲಕ್ಷ ಉಳಿಸಿದ್ದೇನಲ್ಲ ಅಂತ.