ಮನೆ ಹಾಸ್ಯ ಹಾಸ್ಯ

ಹಾಸ್ಯ

0

ಪೊಲೀಸ್ ಇನ್ಸ್ಪೆಕ್ಟರ್ : ಒಂದೇ ಮನೆಯಲ್ಲಿ, ಒಂದೇ ರಾತ್ರಿ ಯಾಕೆ ಮೂರು ಸಲ ಕಳ್ಳತನ ಮಾಡಿದೆ?

ಕಳ್ಳ : ಏನು ಮಾಡೋದು ಸಾರ್. ನಾನು ತಂದ ಸೀರೆನ ಬಣ್ಣ ಚೆನ್ನಾಗಿಲ್ಲಅಂತ ನನ್ನ ಹೆಂಡತಿ ಒಪ್ಪಲಿಲ್ಲ.

***

“ಶಾಸ್ತ್ರಿಗಳೇ, ಪೂಜೆಗೆ ಬೆಲ್ಲದ ಅಚ್ಚು ಸಿಕ್ತಾ ಇಲ್ಲ. ಸಕ್ಕರೆ ಇಡಬಹುದಾ?”

“ಸಕ್ಕರೆ ಆದರೆ ಎರಡು ಕೆಜಿ ಇಡಬೇಕಾಗುತ್ತೆ, ತಾಯಿ. ಮಂತ್ರಾನು ಬೇರೆ ಹೇಳಬೇಕಾಗುತ್ತೆ.”

***

ಮಗ ಬಹಳ ತರಲೆ. ರೋಸಿಹೋದ ಅಪ್ಪ ಕತ್ತೆ ಮಗನೇ ಅಂತ ಹೊಡೆಯೋದಿಕ್ಕೆ ಹೋದಾಗ ಮಗ ಹೌದ ಅಪ್ಪ! ನನಗೀಗಲೇ ಗೊತ್ತಾಗಿದ್ದು.

ತಂದೆ : ಏನು ಗೊತ್ತಾಗಿದ್ದು ನಿನ್ನ ತಲೆ?

ಮಗ : ಅದೇ ಅಪ್ಪ, ನಮ್ಮಪ್ಪ ಕತ್ತೆ ಅನ್ನೋ ವಿಷಯ.

***

ಆತ : ಪ್ರೀತಿ ಅಡ್ವೆಂಚರ್ರೋ, ಕರ್ತವ್ಯವೋ

ಈತ : ನಿನ್ನ ಹೆಂಡ್ತಿನ ಪ್ರೀತಿಸಿದರೆ ಅದು ಕರ್ತವ್ಯ. ಬೇರೆಯವರ ಹೆಂಡ್ತಿನ ಪ್ರೀತಿಸಿದರೆ ಅದು ಅಡ್ವೆಂಚರ್.