ಡಾಕ್ಟರ್ : ಆ ಮಂಚದಲ್ಲಿ ಮಲಗಿರುವ ರೋಗಿಯ ದೇಹದ ಉಷ್ಣತೆಯನ್ನು ಅಳೆಯಲಾಗಿದೆಯೇ?
ನರ್ಸ್ : ಅಳೆಯ ಬೇಕಾಗಿಲ್ಲ ಡಾಕ್ಟರ್, ಅವನ ದೇಹದಲ್ಲಿ ಈಗ ಉಷ್ಣತೆಯೇ ಇಲ್ಲ.
***
ಬಾಲು : ನನ್ನ ಹೃದಯ ವಿಶಾಲವಾಗಿದೆ. ನೀನು ಒಮ್ಮೆ ನನ್ನ ಪ್ರೀತಿಯ ರುಚಿ ನೋಡಿದರೆ ಸಾಯೋ ತನಕ ಮರೆಯೋಲ್ಲ.
ಹುಡುಗಿ : ನನ್ನ ಚಪ್ಪಲಿ ತುಂಬಾ ಸ್ಟ್ರಾಂಗ್ ಇದೆ. ಒಮ್ಮೆ ರುಚಿ ನೋಡಿದರೆ ನೀನು ಕೂಡ ಸಾಯೋ ತನಕ ಮರೆಯಲ್ಲ.
***
ಹೆಂಡತಿ ಬಜಾರಿಯಾದ್ದರಿಂದ ಗಂಡ ಹೆಚ್ಚಿಗೆ ಮಾತನಾಡುತ್ತಿರಲಿಲ್ಲ. ದೂರಂತೂ ಇಲ್ಲವೇ ಇಲ್ಲ. ಒಂದು ದಿನ ಊಟಕ್ಕೆ ಕೂಗುತ್ತಾ ಹೆಂಡತಿ “ರೀ ಸಾರಿಗೆ ಉಪ್ಪು ಜಾಸ್ತಿ ಅಂತ ಹೇಳಬಾರದ, ಸುಮ್ಮನೆ ತಿಂತಾ ಇದ್ದೀರಾ” ಎಂದು ಹೇಳಿದಳು.
ತಕ್ಷಣದ ಗಂಡ ಹೇಳಿದ “ಉಪ್ಪು ಸರಿಯಾಗಿದೆ. ಆದರೆ ಉಪ್ಪಿನ ಪ್ರಮಾಣಕ್ಕೆ ಸಾರು ಕಡಿಮೆಯಾಗಿದೆ.”
***
ನೀನಾ : ಮರೆಗುಳಿ ಪ್ರೊಫೆಸರ್ ನ ನಾನು ಮದುವೆಯಾಗಿದ್ದು ಒಳ್ಳೆಯದೇ ಆಯಿತು.
ಗೆಳತಿ : ಕೇಳಿದಾಗಲೆಲ್ಲ ನಿನಗೆ ಸೀರೆ ಕೊಂಡುಕೊಡ್ತಾರಾ?
ನೀನಾ : ಇಲ್ಲ, ನನ್ನ ಹುಟ್ಟುಹಬ್ಬಕ್ಕೆ ಮಾತ್ರ, ಆದರೆ ತಾರೀಖು ತಿಂಗಳು ಅವರಿಗೆ ನೆನಪಿರಲ್ಲ. ಹೀಗಾಗಿ ನನಗೆ ಸೀರೆ ಬೇಕಾದಾಗೆಲ್ಲ ಹುಟ್ಟು ಹಬ್ಬ ಇಟ್ಕೋತೀನಿ.