ಡಾಕ್ಟರ್ ಧಡೂತಿಯಾಗಿದ್ದ ರೋಗಿಯೊಬ್ಬರಿಗೆ ಆರೋಗ್ಯದಿಂದಿರಲು “ರಾತ್ರಿ ಹೊತ್ತು ಎರಡು ಚಪಾತಿ, ಒಂದು ಲೋಟ ಹಾಲು ಸೇವಿಸಲು” ಸಲಹೆ ಮಾಡಿದರು.
“ಡಾಕ್ಟರರೇ, ಇವುಗಳನ್ನು ಊಟದ ಮೊದಲು ಸೇವಿಸಬೇಕೋ, ಊಟದ ನಂತರ ಸೇವಿಸಬೇಕೋ?” ಎಂದು ಕೇಳಿದ ಆ ಧಡೂತಿ. ಡಾಕ್ಟರರು ದಂಗಾಧರು !
***
ಸುಂದರ : ಜಾನ್ ನನ್ನ ಬಲಗೈ ಬೆರಳುಗಳನ್ನೆಲ್ಲ ಹೇಗೆ ಕಳಕೊಂಡ?
ರಮೇಶ : ಅವರು ತೆಪ್ಪಗಿರದೆ ಕುದುರೆ ಬಾಯಲ್ಲಿ ಕೈಹಾಕಿ ಅದರ ಹಲ್ಲು ಎಣಿಸೋಕೆ ಹೋಗಿದ್ದ.
ಸುಂದರ : ಆಗ ಏನಾಯ್ತು ?
ರಮೇಶ : ಕುದುರೆ ಬಾಯಿ ಮುಚ್ಕೊಂಡು ಜಾನ್ ಕೈಯಲ್ಲಿ ಎಷ್ಟು ಬೆರಳಿದೆ ಅಂತ ಎಣಿಸ್ತು.
***
ಸುಂದರಮ್ಮ: ಯಕ್ರೀ ರಾಧಮ್ಮ, ನಿಮ್ಮ ಅಳಿಯನ ಮೇಲೆ ರೇಗ್ತಾ ಇದ್ದೀರಾ. ಅವರು ಸಂಬಳ ತಂದು ಹೆಂಡ್ತಿಗೆ ಕೊಡುತ್ತಿದ್ದಾರಂತೆ.
ರಾಧಮ್ಮ : ಹೆಂಡ್ತಿಗೆ ಕೊಡುತ್ತಿದ್ದಾರೆ ಹೌದು. ಆದರೆ ಅವರ ಹೆಂಡತಿಗೆ ಅಲ್ಲ, ಪ್ರತಿ ತಿಂಗಳು ಬೇರೆ ಬೇರೆಯವರ ಹೆಂಡ್ತಿಗೆ.
***
ಬಾಲು ಎಕ್ಸಾಮ್ ಹಾಲಿನಲ್ಲಿ ಸಕ್ಕತ್ ಬೇಜಾರು ಮಾಡಿಕೊಂಡು ಕುಳಿತಿದ್ದ.
ಮೇಷ್ಟ್ರು : ಏನಾಯ್ತೋ? ಕೊಶನ್ ಪೇಪರ್ ಕಷ್ಟ ಇದ್ಯೇನೋ?
ಬಾಲು : ಇಲ್ಲ ಸರ್, ತಲೆ ಕೆಡ್ತಾಇದೆ. ಈ ಕ್ವೆಶ್ಚನ್ ಗೆ ಆನ್ಸರ್ ಯಾವ ಜೇಬಿನಲ್ಲಿದೆ ಅಂತಾನೆ ಗೊತ್ತಾಗ್ತಾ ಇಲ್ಲ!
***
“ಸಾರ್, ನಿನ್ನೆ ನೀವು ಮನೆಯಲ್ಲಿ ಮಾಡಿಕೊಂಡು ಬನ್ನಿ ಅಂತ ಹೇಳಿ ಕೊಟ್ಟಿದ್ರಲ್ಲ, ಲೆಕ್ಕ ಅದನ್ನ 10 ಸಲ ಮಾಡಿದ್ದೀನಿ” ವಿದ್ಯಾರ್ಥಿಯೊಬ್ಬ ಹೇಳಿದ.
“ವೆರಿಗುಡ್” ಎಂದು ಮೇಷ್ಟ್ರು “ಇವನ ಕಾಲ ಕೆಳಗೆ ತೂರಿ ಆಗಲಾದರೂ, ನಿಮಗೆ ಸ್ವಲ್ಪ ಗಣಿತ ಬರುತ್ತೆ” ಎಂದು ಹೇಳಿದರು.
ʼಆದರೆ ನೋಡಿ ಸರ್ʼ ವಿದ್ಯಾರ್ಥಿ ಹೇಳಿದ ʼ10 ಉತ್ತರ ಬಂದಿದೆ.”