ಬಿಳಿ ಕೂದಲು
Saval TV on YouTube
ನನ್ನ ಎಂಟು ವರ್ಷ ಮಗ ತುಂಬಾ ತುಂಟ. ಅಂತೆಯೇ ಬಲು ಚೂಟಿ. ಒಮ್ಮೆ ಮನೆಯಲ್ಲಿ ಎಲ್ಲರೂ ಕೂಡಿ ಹರಟೆ ಹೊಡೆಯುತ್ತಾ ಒಬ್ಬರನ್ನೊಬ್ಬರು ತಮಾಷೆ ಮಾಡುತ್ತಾ ನಗೆಗಡಲಲ್ಲಿ ತೇಲುತ್ತಿದ್ದಾಗ ಆತ ನನಗೆ ಕೇಳಿದ ‘ಅಪ್ಪಾ, ನಿಮ್ಮ ಕೆಲ ಕೂದಲುಗಳು ಏಕೆ ಬಿಳಿಯಾಗಿವೆ’?
‘ನೀನು ಆಗಾಗ ನನ್ನನ್ನು ತುಂಬಾ ಸತಾಯಿಸಿ ಬೇಜಾರು ಮಾಡುತ್ತೀಯಲ್ಲಾ. ಆಗ ಒಂದೊಂದೇ ಕೂದಲು ಬಿಳಿಯಾಗುತ್ತಾ ಹೋಗುತ್ತದೆ ತಿಳಿಯಿತಾ?’ ಎಂದೆ.
ಅದಕ್ಕೆ ಅವನು ‘ಈಗ ತಿಳಿಯಿತು ಬಿಡು. ಯಾಕೆ ಅಜ್ಜನ ಎಲ್ಲ ಕೂದಲು ಅಷ್ಟು ಬೇಗ ಬಿಳಿಯಾದದ್ದು ಅಂತ’. ಅನ್ನುವುದೇ!
*********
ಸೀರೆ ಸೆಲೆಕ್ಟ್
ಇದೀಗ ಬಂದ ಸುದ್ದಿ ಯುವತಿ ಕೇವಲ ಐದು ನಿಮಿಷದಲ್ಲೇ ಸೀರೆ ಸೆಲೆಕ್ಟ್ ಮಾಡಿದ್ದನ್ನು ನೋಡಿ ದಿಗಿಲುಗೊಂಡ ಸೀರೆ ತೋರಿಸುತ್ತಿದ್ದ ಹುಡುಗ ಹೃದಯಾಘಾತದಿಂದ ಸ್ಥಳದಲ್ಲೇ ಸಾವು.