ಟಚ್ ಇರಲಿ
ಮಾಲಾ: “ಮಗಳ ಮನೆಯಲ್ಲಿದ್ರು ನಿಮ್ಮತ್ತೆ ಯಾಕೆ ಆಗಾಗ ಬಂದು ಹೋಗ್ತಾರೆ?”
ಶೀಲಾ: “ಜಗಳದ ಟಚ್ ಬಿಟ್ಟು ಹೋಗದಿರಲಿ ಅಂತ”
*****
ಜೂಜು
ಗುಂಡನಿಗೆ ಬೆಟ್ಟಿಂಗ್ ಕಟ್ಟುವ ಚಟ. ಯಾವ ವಿಚಾರದಲ್ಲೂ ಅವನು ಬೆಟ್ಟಿಂಗ್ ಮಾಡುತ್ತಿದ್ದ. ಅವನ ತಂದೆ ಅವನ ಈ ಚಟ ಬಿಡಿಸಬೇಕೆಂದು ತೀರ್ಮಾನಿಸಿದ್ದರು. ಒಂದು ದಿವಸ ಗುಂಡ ಹೇಳಿದ –
“ಅಪ್ಪ ಊರಿನ ಗದ್ದೆ ಬ್ಯಲಿನಲ್ಲಿ ನೀನು ಬರಿ ಚಡ್ಡಿಯಲ್ಲಿ ಬರಲಿಕ್ಕಾಗುವುದಿಲ್ಲ..”
ಇದೇ ವಿಚಾರದಲ್ಲಿ ಅಪ್ಪ-ಮಗನ ನಡುವೆ ನೂರು ರೂಪಾಯಿ ಬೆಟ್ಟಿಂಗ್ ನಡೆಯಿತು. ಮಗ ಸೋತರೆ ಬೆಟ್ಟಿಂಗ್ ಬಿಡುತ್ತಾನೆಂದ ಅವನಪ್ಪ ಬರಿ ಚಡ್ಡಿಯಲ್ಲಿ ಗದ್ದೆಯಲ್ಲಿ ಓಡಿ ಬಂದ. ಮನೆಗೆ ಬಂದು ನೋಡಿದಾಗ ಗುಂಡ ಊರಿನ ಹತ್ತಾರು ಜನರ ಬಳಿಯಲ್ಲಿ ಅಪ್ಪ ಬರಿ ಚಡ್ಡಿಯಲ್ಲಿ ಗದ್ದೆ ಬಯಲಿನಲ್ಲಿ ಓಡುತ್ತಾರೆಂದು ಬಾರಿ ಬೆಟ್ಟಿಂಗ್ ಕಟ್ಟಿದ್ದ.
*****
ನಿಖರ ಸಂಖ್ಯೆ
ಶ್ಯಾಮು: “ಸಾರ್ ನಿಮ್ಮ ಬೈಕಿಗೆ ಡಿಕ್ಕಿ ಹೊಡೆದ ಕಾರಿನ ಸಂಖ್ಯೆ ಗೊತ್ತಾ?”
ರಾಮು: ನಿಖರ ಸಂಖ್ಯೆ ಗೊತ್ತಿಲ್ಲ. ಆದರೆ ಮೊದಲ ಮತ್ತು ಕೊನೆಯ ಸಂಖ್ಯೆ ಸಮನಾಗಿದೆ, ಎರಡನೇ ಸಂಖ್ಯೆಯು ಮೊದಲ ಮತ್ತು ಮೂರನೆ ಸಂಖ್ಯೆಯ ಮೊತ್ತವಾಗಿದೆ ಹಾಗೆ ಮೂರನೇ ಸಂಖ್ಯೆಯು ಮೊದಲ ಸಂಖ್ಯೆ ವರ್ಗವಾಗಿದೆ ಎಂದನು ಸಂಖ್ಯಾಶಾಸ್ತ್ರ ಪ್ರವೀಣ ಶ್ಯಾಮು.
*****














