Saval TV on YouTube
ಒಟ್ಟಿಗೆ
ಗುಂಡ: “ನನಗೆ ಹತ್ತು ಜನ ಒಟ್ಟಿಗೆ ಹೊಡಿಯೋಕೆ ಬಂದ್ರು.”
ಪುಟ್ಟ: “ಹೌದಾ; ಆಮೇಲೆ”
ಗುಂಡ: “ತಾಕತ್ ಇದ್ರೆ ಒಬ್ಬರೆ ಬನ್ನಿ ಅಂದೆ” .
ಪುಟ್ಟ: “ಆಮೇಲೆ”
ಗುಂಡ: “ಒಬ್ಬೊಬ್ರೆ ಬಂದು ಹೊಡೆದ್ರು…”
*****
ಲಂಚ ನಿರ್ಮೂಲನಾಧಿಕಾರಿ
ಶೀಲಾ: “ನಿಮ್ಮಾಫಿಸಿಗೆ ಲಂಚ ನಿರ್ಮೂಲನಾಧಿಕಾರಿ ಬಂದಿದ್ರಂತೆ”
ಮಾಲ: “ಹೌದು..”
ಶೀಲಾ: “ಏನು ಮಾಡಿದ್ರು?”
ಮಾಲ: “ಮಾಮೂಲಿ ಪಡೆದುಕೊಂಡು ಹೋದ್ರು..”
*****
ಸಂದರ್ಶನ
ಸೇಲ್ಸ್ ಗರ್ಲ್‌ಗಾಗಿ ಸಂದರ್ಶನ ನಡೆಯುತ್ತಿದ್ದು, ಸಂದರ್ಶಕರು ಕೇಳಿದ್ರು – “ಅತಿಯಾಗಿ ಸುಳ್ಳು ಹೇಳಿದ್ರೆ ಏನು ಮಾಡ್ತಾರೆ ಗೊತ್ತ?”
ಸಂದರ್ಶಕಿ: “ಗೊತ್ತು ಸಾರ್”
ಸಂದರ್ಶಕರು ಕೇಳಿದ್ರು : “ಏನು ?”
ಸಂದರ್ಶಕ ಹೇಳಿದ್ದು – “ಸೇಲ್ಸ್ ಮ್ಯಾನೇಜರ್”