ನಿಮ್ಮ ಹತ್ತಿರಾನೆ?
ಹಳ್ಳಿಗನೊಬ್ಬ ಡಾಕ್ಟರ್ ಕ್ಲಿನಿಕ್‌ಗೆ ಬಂದಿದ್ದ. ತಪಾಸಣೆ ಮಾಡಿದ ವೈದ್ಯೆ ಕೇಳಿದ್ಲು –
ನಿಮಗೆ ಏಡ್ಸ್ ರೋಗ ಬಂದಿರುವ ಶಂಕೆ ಇದೆ. ನೀವು ಈ ಮೊದಲು ಯಾರಾದ್ರೂ ಹೆಂಗಸರ ಬಳಿ ಹೋಗಿದ್ರಾ?
ಹಳ್ಳಿಗ ಮುಗ್ಧತೆಯಿಂದ ನುಡಿದ – ಇಲ್ಲ ಮೇಡಂ ನಿಮ್ಮ ಹತ್ತಿರನೇ ಮೊದಲು ಬರ್‍ತಿರೋದು…
*****
ಯಾಕೆ?
ಗುಂಡ: ಶಾಲಾ ವಠಾರದಲ್ಲಿ ‘ನಿಧಾನವಾಗಿ ಚಲಿಸಿ’ ಎನ್ನುವ ಫಲಕ ಹಾಕಿರುತ್ತಾರೆ. ಕಾಲೇಜಿನ ಬಳಿ ಯಾಕಿರುವುದಿಲ್ಲ..
ತಿಮ್ಮ: ಯಾಕೆಂದ್ರೆ ಅಲ್ಲಿ ಗಾಡಿ ತನ್ನಷ್ಟಕ್ಕೆ ತಾನೇ ಸ್ಲೋ ಆಗುತ್ತೆ.
*****
ಎಲ್ಲಿಗೆ
ಶೀಲಾ: ಎಲ್ಲಿಗೆ ಗನ್ ಹಿಡಿದು ಕೊಂಡು ಹೊರಟಿರುವಿರಿ?
ಗುಂಡ: ಹುಲಿಯ ಬೇಟೆಗೆ
ಶೀಲಾ: ಮತ್ಯಾಕೆ ನಿಂತಿರುವಿರಿ ಹೋಗಿ..
ಗುಂಡ: ಹೊರಗೆ ನಾಯಿ ಗುರಾಯಿಸ್ತಾ ಇದೆ. ಅದನ್ನು ಸ್ವಲ್ಪ ಓಡಿಸು ಮತ್ತೆ…
Saval TV on YouTube