ಸುಟ್ಟು ಬಿಡಿ
ತಾಯಿ: ಯಾಕೋ ಸಿಗರೇಟು ಸೇದುತ್ತಿ?
ಮಾಣಿ: ಮತ್ತೆ ನೀನೇ ಹೇಳಿದೆ ಕೆಟ್ಟದ್ದನ್ನು ಸುಟ್ಟುಬಿಡಿ ಅಂತ
*****
ಜಾಸ್ತಿ ಬಾಡಿಗೆ
ಗಂಡ: ಪ್ರಿಯೆ ನಿನ್ನಾಸೆ ನೆರವೇರಿದೆ ನಾವೀಗ ಜಾಸ್ತಿ ಬಾಡಿಗೆ ಮನೆಗೆ ಹೋಗ್ತೀವಿ…
ಹೆಂಡತಿ: ಅಂತೂ ಮನೆ ಬದಲಾಯಿಸುತ್ತಿದ್ದೀರಾ?
ಗಂಡ: ಇಲ್ಲಾ ನಾವಿರುವ ಮನೆ ಬಾಡಿಗೆ ಜಾಸ್ತಿ ಮಾಡಿದ್ದಾರೆ.
*****
ಟ್ಯೂಷನ್
ಗುಂಡ: ಅಮ್ಮಾ ಯು.ಕೆ.ಜಿ ನಂತರ ನಾನು ಶಾಲೆಗೆ ಹೋಗೊಲ್ಲಾ
ಅಮ್ಮ: ಯಾಕೋ
ಗುಂಡ: ನಾನು ಜಾಬ್ ಮಾಡ್ತಿನಿ
ಅಮ್ಮ: ಬರಿ ಯು.ಕೆ.ಜಿ.ಗೆ ಏನು ಕೆಲಸ ಸಿಗುತ್ತೆ?
ಗುಂಡ: ಎಲ್.ಕೆ.ಜಿ. ಗರ್ಲ್ಸಗೆ ಟ್ಯೂಷನ್ ಮಾಡ್ತಿನಿ.