ಕಣ್ಣಿಗೆ ಬಿದ್ದು
ಎಂಕ್ಟ : “ನನ್ನ ಹೆಂಡ್ತಿ ಕಣ್ಣಿಗೆ ಕಸ ಬಿದ್ದು ನೂರು ರೂಪಾಯಿ ಖರ್ಚಾಯ್ತು.”
ತಿಮ್ಮ : “ನನ್ನ ಹೆಂಡ್ತಿ ಕಣ್ಣಿಗೆ ರೇಷ್ಮೆ ಸೀರೆ ಬಿದ್ದು ನನಗೆ ಸಾವಿರ ರೂಪಾಯಿ ಖರ್ಚಾಯ್ತು.”
*****
ನೀರಿಗೆ ಬರವೇ?
ಗುಂಡ ತನ್ನ ಅಮ್ಮನನ್ನು ಕೇಳಿದ “ಅಮ್ಮಾ ಅಕ್ಕನ ಊರಿನಲ್ಲಿ ನೀರಿಗೆ ತುಂಬಾ ಬರುವೆ?”
ಅಮ್ಮ ಕೇಳಿದ್ಲು “ಯಾಕೆ ಮಗು?”
ಗುಂಡ ಹೇಳಿದ “ಮತ್ತೆ ನಿನ್ನ ಫೋನಿನಲ್ಲಿ ಹೇಳಿದ್ಲು ನಾನು ಇಲ್ಲಿ ಕಣ್ಣೀರಿನಲ್ಲೇ ಕೈ ತೊಳೆಯುತ್ತಿರುವೆ”
*****
ಲೇಖನ ಓದಿ
“ಕುಡಿತದ ಬಗೆಗೆ ಕಾರ್ಯಕ್ರಮಗಳನ್ನು ನೋಡಿ ನೋಡಿ ನಾನು ಕೊನೆಗೂ ಬಿಟ್ಟೆ”
“ಕುಡಿತ ಬಿಟ್ರಾ…?”
“ಇಲ್ಲ ಅಂತಹ ಕಾರ್ಯಕ್ರಮಗಳನ್ನು ನೋಡುವುದನ್ನೆ ಬಿಟ್ಟೆ.”















