ಗುರುತು
ಗುಂಡ ಊಟ ಮಾಡುವಾಗ ಮನೆಯೊಡೆಯನನ್ನು ಕೇಳಿದ.
“ಯಾಕೆ ನಿಮ್ಮ ನಾಯಿ ನಾನು ತಿಂಡಿ ತಿನ್ನುವಾಗೆಲ್ಲ ಜೋರಾಗಿ ಬೊಗಳುತ್ತೆ?”
ಅದಕ್ಕೆ ಮನೆಯೊಡೆಯ ಹೇಳಿದ “ಅದರ ತಟ್ಟೆಯಲ್ಲಿ ಬೇರೆ ಯಾರಿಗೆ ತಿಂಡಿ ಕೊಟ್ಟರು ಅದಕ್ಕೆ ಸಿಟ್ಟು.”
*****
ತಾಯತದ ಪ್ರಭಾವ
ಗುಂಡ : “ನೀವು ಕೊಟ್ಟ ತಾಯತದ ಪ್ರಭಾವ ಚೆನ್ನಾಗಿದೆ ಸ್ವಾಮಿ.”
ಶಾಶ್ತ್ರಿಗಳು : “ತಾಯತ ಕಟ್ಟಿದ ಮೇಲೆ ನಿಮ್ಮ ಹೆಂಡತಿಗೆ ಹಿಡಿದ ಭೂತ ಓಡಿ ಹೋಯಿತು ತಾನೆ”
ಗುಂಡ : “ಇಲ್ಲ ಸ್ವಾಮಿಗಳೇ ನನ್ನ ಹೆಂಡತಿಯೇ ಓಡಿ ಹೋದಳು.”
*****
ಯಾವುದು?
ಶೀಲಾ : “ಸಾರಾಯಿ, ಮತ್ತು ನೀರು ಇದರಲ್ಲಿ ಯಾವುದು ಅಪಾಯಕಾರಿ”
ಗುಂಡ : “ನೀರು”
ಶೀಲಾ : “ಅದು ಹ್ಯಾಗೆ?”
ಗುಂಡ : “ಪ್ರವಾಹ ಬಂದರೆ ಸಾವಿರಾರು ಜನ ಸಾಯುತ್ತಾರೆ, ಆದರೆ ಈ ಸಾರಾಯಿಯಿಂದ ಎಲ್ಲಿ ಅಷ್ಟೊಂದು ಜನ ಸಾಯುತ್ತಾರೆ?”














