ಅದೇ ಬೆಕ್ಕು
ಕನ್ನಡ ಮೇಷ್ಟ್ರು ಮಕ್ಕಳಿಗೆ ಬೆಕ್ಕಿನ ಕುರಿತು ಪ್ರಬಂಧ ಬರೆದುಕೊಂಡು ಬರಲು ಹೇಳಿದರು. ಹುಡುಗರು ಪ್ರಬಂಧ ಬರೆದು ಕೊಂಡು ಬಂದರು. ಶೀಲಾಳನ್ನು ಕರೆದು ಮೇಷ್ಟ್ರು ಕೇಳಿದ್ರು.
“ಏನಮ್ಮ ನೀನು ಬರೆದ ಪ್ರಬಂಧ ಕಳೆದ ಬಾರಿ ನಿನ್ನ ಕ್ಕೆ ಬರೆದ ಪ್ರಬಂಧ ಒಂದೇ ರೀತಿ ಇದೆ.”
ಅದಕ್ಕೆ ಶೀಲಾ ಹೇಳಿದ್ಲು, “ಸಾರ್ ನಾವಿಬ್ಬರು ಪ್ರಬಂಧ ಬರೆದಿರುವುದು ಒಂದೇ ಬೆಕ್ಕಿನ ಕುರಿತು.”
*****
ಮಾರ್ಕ್ಸ್ವಾದಿ
ಗುಂಡ ತನ್ನ ಗೆಳೆಯನನ್ನು ಪರಿಚಯ ಮಾಡುತ್ತಾ. “ಇವರೊಬ್ಬ ಮಾರ್ಕ್ಸ್ವಾದಿ”ಯೆಂದನು.
ಅದಕ್ಕೆ ಗೆಳೆಯ ಕೇಳಿದ “ಹಾಗಾದರೆ ಕಾರ್ಲ್ಮಾರ್ಕ್ಸ್ ಇವರ ಮೇಲೆ ತುಂಬಾ ಪ್ರಭಾವ ಬೀರಿರಬೇಕು”
ಅದಕ್ಕೆ ಗುಂಡ ಹೇಳಿದ “ಹಾಗೇನಿಲ್ಲ ಕಾಪಿ ಹೊಡೆದಾದರೂ ಇವರು ಮಾರ್ಕ್ಸ್ ತೆಗೆದುಕೊಳ್ಳುತ್ತಾರೆ.”
*****
ಭಾರ
ತಂದೆ ಮಗಳನ್ನು ಕೇಳಿದರು “ಯಾಕಮ್ಮ ಶೀಲಾ ದೇವರ ಮೇಲೆ ಕಲ್ಲು ಇಟ್ಟಿರುವೆ?”
“ನೀನೆ ಹೇಳಿದ್ದೆಯಲ್ಲಾ ಕಷ್ಟ ಕಾಲ ಬಂದಾಗ ದೇವರ ಮೇಲೆ ಭಾರ ಹಾಕು, ಈಗ ಪರೀಕ್ಷೆ ಕಾಲವಾಗಿರುವುದರಿಂದ ಹೀಗೆ ಮಾಡಿರುವೆ.”














