ಮನೆ ಹಾಸ್ಯ ಗಣೇಶ ಮತ್ತು ಮಳೆ: ಹಾಸ್ಯ

ಗಣೇಶ ಮತ್ತು ಮಳೆ: ಹಾಸ್ಯ

0

“ಮೊದಲೆಲ್ಲಾ ಗಣೇಶನ ಬಿಡಲು ಕೆರೆ, ಕಟ್ಟೆ, ಹೊಳೆಗೆ ಹೋಗಬೇಕಾಗಿತ್ತು. ಈಗ ಕೆರೆಗಳೇ ಮನೆ ಬಳಿ ಬರುತ್ತಿವೆ.”

“ಶಿವ ಶಿವ, ಹಬ್ಬಕ್ಕೆ ಗೌರಮ್ಮನ ಕಳುಹಿಸು ಎಂದರೆ ಗಂಗಮ್ಮನೂ ಕಳುಹಿಸಿಕೊಟ್ಟಿದ್ದೀಯಲ್ಲಪ್ಪ…. ಏಕೋ ಈ ಕೋಪ ಶಂಕರಾ, ಶಿವಶಂಕರ…”

ಫೋನ್ನಲ್ಲಿ ತುರ್ತು ಸುದ್ದಿ ಕೇಳಿದ ಡಾಕ್ಟರು ನರ್ಸ್’ನ ಕರೆದು ಹೇಳಿದರು.

‘ಸಿಸ್ಟರ್, ಬೇಗ ನನ್ನ ಕಿಟ್ ತಗೊಂಡು ಬನ್ನಿ. ನೀವು ಬರದಿದ್ರೆ ಈಗ್ಲೇ ಸತ್ತು ಹೋಗ್ತೀನಿ ಎಂದು ಪೇಷಂಟ್ ಹೇಳ್ದ. ಈಗಲೇ ಹೋಗ್ಬೇಕು.”

‘ಆ ಪೇಷೆಂಟ್ ಫೋನ್ ಮಾಡಿ ಕರೆದದ್ದು, ನಿಮ್ಮನ್ನಲ್ಲ ಸಾರ್. ನನ್ನನ್ನು !” ಎಂದು ನಸುನಾಚುತ್ತಾ ಉಂಗುಷ್ಟದಿಂದ ನೆಲ ಕೆರೆಯುತ್ತಾ ನರ್ಸ್ ಹೇಳಿದಾಗ ಡಾಕ್ಟರು ಸುಸ್ತೋಸುಸ್ತು.

ಮೊದಲು ಅಪ್ಪನ ಮೇಲೆ ಪ್ರಯೋಗ

ಎರಡನೇ ಪಿಯುಸಿ ಹುಡುಗನ ಬಗ್ಗೆ ತಾಯಿ ಬಳಿ ದೂರು ಹೇಳಲು ಪ್ರಿನ್ಸಿಪಾಲ್ ಪ್ರಯತ್ನಿಸಿದರು. ‘ನೋಡಿ ತಾಯಿ. ನಿಮ್ಮ ಮಗ ಹುಡುಗೀರ ಜೊತೆ ಸದಾ ಮಾತಾಡ್ತಾ ತಿರುಗಾಡ್ತಾ ಇರ್ತಾನೆ. ಈ ಚಟ ಬಿಡಿಸೋಕೆ ಒಂದೆರಡು ಮಾರ್ಗ ಹುಡುಕಿದೀನಿ..” ಆಕೆ ಕಣ್ಣರಳಿಸಿದಳು.

ಕೈ ಮುಗಿದು ಕೇಳಿದಳು : ‘ಸಾರ್, ಆ ಮಾರ್ಗ ಯಾವುದು ಅಂತ ನನಗೂ ತಿಳಿಸಿ. ಅದನ್ನ ಇವನ ಅಪ್ಪನ ಮೇಲೆ ನಾನು ಪ್ರಯೋಗ ಮಾಡಬೇಕಿದೆ.”

ಹಿಂದಿನ ಲೇಖನಕ್ಯಾಬ್ ವಿಳಂಬದಿಂದಾಗಿ ತಪ್ಪಿದ ವಿಮಾನ: ವಕೀಲೆಗೆ ₹20,000 ಪರಿಹಾರ ನೀಡಲು ಉಬರ್’ಗೆ ಆದೇಶಿಸಿದ ಗ್ರಾಹಕರ ವೇದಿಕೆ
ಮುಂದಿನ ಲೇಖನನಂಜನಗೂಡು: ಸಿದ್ದೇಶ್ವರ ಸ್ವಾಮಿ ಜಾತ್ರಾ ಮಹೋತ್ಸವ