ಮೂರ್ಖ
ಹುಳುವೊಂದು ಹಣ್ಣನ್ನು ಕೊರೆದು ಹೊರಗೆ ಬರುತಿತ್ತು. ಹೊರಗೆ ಇನ್ನೊಂದು ಹುಳುವನ್ನು ನೋಡಿ “ಐ ಲವ್ ಯು” ಅಂತು.
ಆಗ ಅದು “ಮೂರ್ಖನಂತೆ ಮಾತನಾಡಬೇಡ ನಾನು ನಿನ್ನ ಇನ್ನೊಂದು ತುದಿ.”
*****
ಗಂಡ ಬಿಡಬೇಕಲ್ಲ
ಗುಂಡನ ಹೆಂಡತಿ ಶೀಲಾ ಹೇಳಿದ್ಲು “ಪಕ್ಕದ ಮನೆ ಸುಂದರ ತನ್ನ ಹೆಂಡ್ತಿ ಸುಶೀಲಳಿಗೆ ದಿನಾ ಆಫೀಸಿಗೆ ಹೋಗುವಾಗ ಮುತ್ತು ಕೊಟ್ಟು ಹೋಗ್ತಾನೆ, ನೀವು ಯಾಕೆ ಹಾಗೆ ಮಾಡಬಾರದು ?”
ಗುಂಡ ಹೇಳಿದ “ನಾನು ಕೊಡ್ತಿದ್ದೆ ಆದರೆ ಸುಂದರ ಬಿಡಬೇಕಲ್ಲ.”














