ಅಕ್ಬರ್ ಮತ್ತು ಅವನ ಹೆಂಡತಿ ಅರಮನೆ ಪಡಸಾಲೆಯಲ್ಲಿ ಕುಳಿತಿದ್ದರು. ಅಕ್ಬರ್ ಮಾವಿನ ಹಣ್ಣನ್ನು ಬುಟ್ಟಿ ತುಂಬಾ ತರಿಸಿಕೊಂಡು ತಿನ್ನುತ್ತಾ ಅದರ ಗೊರಟಿ, ಸಿಪ್ಪೆಯನ್ನು ಹೆಂಡತಿಯ ಮುಂಭಾಗಕ್ಕೆ ಎಸೆದು ಬಿಡುತ್ತಿದ್ದ. ಆ ಸಮಯಕ್ಕೆ ಸರಿಯಗಿ ಅಲ್ಲಿಗೆ ಬೀರ್ ಬಲ್ ಬಂದ.
“ನೋಡು ಬೀರ್‌ಬಲ್, ನನ್ನ ಹೆಂಡತಿ ಅಷ್ಟೂ ಮಾವಿನ ಹಣ್ಣುಗಳನ್ನು ಒಬ್ಬಳೇ ತಿಂದು ಸಿಪ್ಪೆಗೊರಟೆಗಳನ್ನು ಹೇಗೆ ಗುಡ್ಡೆ ಹಾಕಿದ್ದಾಳೆ.” ಎಂದು ಛೇಡಿಸಿದ.
“ಜಹಾಪನ. ರಾಣಿಯವರು ಹಣ್ಣುತಿಂದು ಸಿಪ್ಪೆಗೋರಟೆಗಳನ್ನು ಬಿಟ್ಟಿರುವುದು ಸತ್ಯ. ಅದರೆ ತಾವು ಅವುಗಳನ್ನೂ ತಿಂದು ಪೂರೈಸಿದ್ದೀರಲ್ಲಾ!” ಅಂದ.
***
ಒಂದು ಬ್ರಿಟಿಷ್ ಹಡಗಿನಲ್ಲಿ ಮೂನ್ನೂರು ಜನ ಪ್ರಯಾಣಿಸುತ್ತಿದ್ದರು. ಹಡಗು ನಡುದಾರಿಯಲ್ಲಿ ನಿಂತು ಬಿಟ್ಟಿತು. ಮುನ್ನೂರು ಜನರೂ ಕೆಳಕ್ಕೆ ಇಳಿದು ಪ್ರಾಣ ಕಳೆದುಕೊಂಡರು. ಅವರು ಯಾತಕ್ಕೆ ಇಳಿದಿದ್ದು ಅಂದರೆ ಆ ನಿಂತ ಹಡಗನ್ನು ಎಲ್ಲರೂ ಇಳಿದು ದಬ್ಬುವುದಕ್ಕೆಂದು!
***
ವೈದ್ಯರು: “ಹೇಗಿದ್ದಾರಮ್ಮಾನಿಮ್ಮಯಜಮಾನರು?”
ಆಕೆ: “ಡಾಕ್ಟರ್, ನನಗೆ ಬೆವರೇ ಬರುತ್ತಿಲ್ಲ ಆಂತಾ ಇದ್ದಾರೆ.”
ವೈದ್ಯರು: “ಬೆವರು ಬರೋದು ಬಲು ಸುಲಭ; ಅವರು ಹೀಗೆ ಮಾಡಲಿ. ಇವತ್ತು ಅವರಿಗೆ ಔಷಧಿ ಕೊಡಬೇಡಿ. ಬದಲಿಗೆ ಈ ಬಿಲ್ಲುಕೊಡಿ ಸಾಕು ಬೆವರುತ್ತಾರೆ!”