ಮನೆ ಹಾಸ್ಯ ನಕ್ಕು ಹಗುರಾಗಿ

ನಕ್ಕು ಹಗುರಾಗಿ

0

ಬೀಗದ ಕೈ ಇದ್ರೂ ರಾಡ್ ಕೊಟ್ಟ ಅಪ್ಪ!

`ನನ್ನ ತಂದೆ ನನ್ನ ನಂಬೊಲ್ಲ ಅನ್ನೋದು ಗ್ಯಾರಂಟಿ ಆಯ್ತು ಕಣೋ” ಎಂದು ರಾಜ ಗೆಳೆಯನ ಬಳಿ ತನ್ನ ದುಃಖ ತೋಡಿಕೊಂಡ.

‘ಹ್ಯಾಗೆ ಬಂದೆ ಈ ನಿರ್ಧಾರಕ್ಕೆ?” ‘ನಿನ್ನೆ ನಾನು ಮೂರ್ಛೆ ಬಂದಂತೆ ನಟಿಸಿ ಕೆಳಗೆ ಬಿದ್ದೆ .

ಕೈಗೆ ಬೀಗದ ಕೈ ಕೊಡಿ ಅಂತ ಎಲ್ಲರೂ ಹೇಳಿದರು. ನಮ್ಮಪ್ಪನ ಕೈಲಿ ತಿಜೋರಿ ಬೀಗದ ಕೈ ಇದ್ದರೂ ಅದನ್ನು ಕೊಡದೆ ಒಂದು ಕಬ್ಬಿಣದ ರಾಡ್ ತಂದು ನನ್ನ ಕೈಗೆ ತುರುಕಿದರು.”

ಈ ವರ್ಷಾನೇ ಗಣಿತ ಕಲಿಸಿ

ಮಗ ಕಷ್ಟ ಪಟ್ಟು ಹೋಂವರ್ಕ್ ಮಾಡುತ್ತಿದ್ದುದನ್ನು ನೋಡಿದ ಪತ್ನಿ ಗಂಡನಿಗೆ ಹೇಳಿದಳು :

ಏನ್ರಿ, ಮಗು 4 ನೇ ಕ್ಲಾಸು. ಗಣಿತ ಕಷ್ಟ ಇದೆ. ಸ್ವಲ್ಪ ಹೇಳಿಕೊಡಿ ಈ ವರ್ಷ. ಮುಂದಿನ ವರ್ಷದಿಂದಂತೂ ನಿಮ್ಮ ಕೈಲಿ ಆಗಲ್ಲ …

ಟೈಪಿಸ್ಟ್ ತಾರಣಿಯ ಹೊಸ ಪ್ಲಾನ್

ಟೈಪಿಸ್ಟ್ ತಾರಿಣಿಯನ್ನು ಬಾಸ್ ಸೋಮು ಆಫೀಸಿನಲ್ಲಿ ಪ್ರೀತಿಸಿ, ಛತ್ರದಲ್ಲಿ ಮದುವೆಯಾದ.

ತೆರವಾದ ಟೈಪಿಸ್ಟ್ ಸ್ಥಾನಕ್ಕೆ ಯಾರನ್ನು ತುಂಬಬೇಕು ಎಂದು ಯೋಚಿಸುತ್ತಿದ್ದಾಗ ತಾರಿಣಿ ಹೇಳಿದಳು :

‘ರಿಟೈರ್ಡ್ ರಾಮಾಶಾಸ್ತ್ರಿಗಳನ್ನು ಟೈಪಿಸ್ಟ್ ಕೆಲ್ಸಕ್ಕೆ ನಾನು ಈಗಾಗಲೇ ಒಪ್ಪಿಸಿದ್ದೇನೆ!”

ಬೀಗದ ಕೈ ಇಲ್ಲದಿದ್ದರೇನಾಯಿತು?

‘ನೋಡಿ ಸಾರ್, ಇದು ಗೋದ್ರೇಜ್ಗಿಂತ ಒಳ್ಳೆಯ ಬೀರು ಸಾರ್, ಬೆಲೆಯೂ ಕಡಿಮೆ. ಎರಡು ಬೀಗದ ಕೈ ಇದೆ. ಒಂದು ಕಳೆದ್ರೆ ಇನ್ನೊಂದು.” ‘ಒಂದು ವೇಳೆ ಎರಡೂ ಬೀಗದ ಕೈ ಕಳೆದು ಹೋದರೆ ?”

‘ಅದೇ ಸಾರ್, ನಮ್ಮ ಸ್ಪೆಷಾಲಿಟಿ, ನೀವು ಚಿಂತೆ ಮಾಡೋ ಅಗತ್ಯವೇ ಇಲ್ಲ. ಹೇರ್’ಪಿನ್ ಹಾಕಿ ತಿರುಗಿಸಿದರೆ ಬೀಗ ಬಿಚ್ಕೊಳ್ಳುತ್ತೆ” ಎಂದ ಅಂಗಡಿಯವ.