ಮದುವೆ ಆದ ಮೊದಲ ವರ್ಷ ಗಂಡ ಮಾತನಾಡುತ್ತಾನೆ. ಹೆಂಡತಿ ಅವನ ಮಾತು ಕೇಳುತ್ತಾಳೆ. ಎರಡನೇ ವರ್ಷದಲ್ಲಿ ಹೆಂಡತಿ ಮಾತನಾಡುತ್ತಾಳೆ;
ಗಂಡ ಕೇಳುತ್ತಾನೆ. ಮೂರನೇ ವರ್ಷದಿಂದ ಗಂಡ ಹೆಂಡತಿ ಇಬ್ಬರೂ ಜೊತೆಯಾಗಿ ಮಾತಾಡುತ್ತಾರೆ. ತಮಾಷೆಯಂದರೆ ಇವರಿಬ್ಬರ ಮಾತನ್ನೂ ನೆರೆಹೊರೆಯವರು ಕೇಳುತ್ತಾರೆ!
***
ಬ್ಯೂಟಿ ಪಾರ್‌ಲರ್ ಮುಂದೆ ಹಾಕಿದ್ದ ಬೋರ್ಡ್‍ನಲ್ಲಿ ಈ ರೀತಿ ಬರೆದಿತ್ತು: ‘ನಮ್ಮಪಾರ್ಲರ್ನಿಂದ ಹೊರಕ್ಕೆ ಹೋಗುವ ಹುಡುಗಿಯರನ್ನು ಕಂಡು ಯಾರೂ ಶಿಳ್ಳೆ ಹೊಡೆಯಬಾರದು. ಏಕೆಂದರೆ ಆಕೆ ನಿಮ್ಮ ಅಜ್ಜಿಯೇ ಆಗಿರಬಹುದು!’