ಶಂಕರ : ಒಂದೊಂದು ಸಾರಿ ಸುಳ್ಳೇ ನಿಜ ಆಗ್ಬಿಡುತ್ತೆ ಕಣೋ.
ರಘು : ಯಾಕೋ ಏನಾಯ್ತು
ಶಂಕರ : ನಮ್ಮತ್ತೆಗೆ ಹುಷಾರಿಲ್ಲ, ಆಸ್ಪತ್ರೆಗೆ ಕರೆದುಕೊಂಡು ಹೋಗಬೇಕಂತ ಡೋಂಗಿ ಹೊಡೆದು ಅರ್ಧ ದಿನ ರಜಾ ಹಾಕಿ ಮನೆಗೆ ಹೋದರೆ ನನ್ನ ಗ್ರಹಚಾರ ನಿಜವಾಗಿ ನಮ್ಮತ್ತೆ ಬಂದಿರೋದಾ.
ರೋಗಿ : (ತರರಾರಿನ ಧ್ವನಿಯಲ್ಲಿ) ಏನು ಹಲ್ಲು ಕೀಳೋದಕ್ಕೆ, ಅದೂ ಒಂದು ನಿಮಿಷದಲ್ಲಿ ಆಗೋ ಕೆಲಸಕ್ಕೆ ಫೀಸ್?
ವೈದ್ಯ : ನಿಮಗೆ ಬೇಕಿದ್ದರೆ ನಿಧಾನವಾಗಿ ಕೇಳುತ್ತೇನೆ ಬಿಡಿ.
********
ಹೆಂಡತಿ : ನಿನ್ನೆ ರಾತ್ರಿ ನೀವೊಂದು ನೆಕ್ಲೆಸ್ ಕೊಡಿಸಿದಂತೆ ಕನಸು ಬಿತ್ತು, ಅದರ ಅರ್ಥ ಏನು ಇರಬಹುದು?
ಗಂಡ : ಇವತ್ತು ಸಂಜೆ ನಿಮಗೆ ಗೊತ್ತಾಗುತ್ತೆ
ಹೆಂಡತಿ ಖುಷಿಯಿಂದ ಕಾದು ಕುಳಿತಳು. ಸಂಜೆ ಮನೆಗೆ ಬಂದಾಗ ಗಂಡ ಗಿಫ್ಟ್ ಪ್ಯಾಕೆಟೊಂದನ್ನು ಕೊಟ್ಟ. ಕೂತೂಹಲದಿಂದ ಅದನ್ನು ಬಿಚ್ಚಿ ನೋಡಿದರೆ “ಕನಸುಗಳನ್ನು ಅರ್ಥಮಾಡಿಕೊಳ್ಳುವುದು ಹೇಗೆ” ಎಂಬ ಪುಸ್ತಕವಿತ್ತು.
***********
ಗೋಪಾಲ : ಹುಡುಗಿಯರಿಗೆ ಐ ಲವ್ ಯು ಹೇಳುವ ಸೇಫ್ ಜಾಗ ಯಾವುದು?
ರಮೇಶ : ದೇವಸ್ಥಾನ ಕಣೋ
ಗೋಪಾಲ : ಅದು ಹೇಗೆ?
ರಮೇಶ : ಅಲ್ಲಿ ಮಾತ್ರ ತಾನೇ ಅವರ ಚಪ್ಪಲಿ ಧರಿಸದೇ ಇರುವುದು.














